March 19, 2026
Thursday, March 19, 2026
spot_img

Relationship | ಮದುವೆ ಫಿಕ್ಸ್ ಆದ್ಮೇಲೆ ಮೊದಲ ಭೇಟಿ: ನಿಮ್ಮ ಹುಡುಗಿಗೆ ಈ ಗಿಫ್ಟ್ಸ್ ತಗೊಂಡ್ ಹೋಗಿ

ಮದುವೆ ನಿಶ್ಚಯವಾದ ಬಳಿಕ ಮೊದಲ ಬಾರಿ ಹುಡುಗಿಯನ್ನು ಭೇಟಿಯಾಗೋ ಕ್ಷಣ ವಿಶೇಷ. ಆ ಭೇಟಿಯನ್ನು ಇನ್ನಷ್ಟು ಸ್ಮರಣೀಯವಾಗಿಸೋಕೆ ಸಣ್ಣ ಗಿಫ್ಟ್ ಒಂದೇ ಸಾಕು. ದುಬಾರಿ ವಸ್ತು ಬೇಕಿಲ್ಲ; ಮನಸಿನಿಂದ ಕೊಟ್ಟ ಪ್ರತಿ ಉಡುಗೊರೆ ಕೂಡ ಹೆಚ್ಚು ಮೌಲ್ಯ ಪಡೆಯುತ್ತೆ.

ಪುಷ್ಪಗುಚ್ಛ ಅಥವಾ ಒಂದು ಸುಂದರ ಹೂವು: ಹೂವು ಎಂದಿಗೂ ಹಳೆಯದಾಗುವುದಿಲ್ಲ. ಒಂದು ಗುಲಾಬಿ ಅಥವಾ ಅವಳಿಗೆ ಇಷ್ಟವಾದ ಹೂವು ನೀಡಿದರೆ ಮೊದಲ ಭೇಟಿಗೆ ಸ್ವೀಟ್ ಟಚ್ ಕೊಡುತ್ತದೆ.

ಚಾಕೊಲೇಟ್:
ಮಧುರ ಕ್ಷಣಕ್ಕೆ ಸಿಹಿ ಸೇರ್ಪಡೆ. ಅವಳಿಗೆ ಇಷ್ಟವಾದ ಚಾಕೊಲೇಟ್ ಆಯ್ಕೆ ಮಾಡಿದರೆ ನಿಮ್ಮ ಗಮನ ಮತ್ತು ಕಾಳಜಿ ಆಕೆಯ ಸಣ್ಣ ವಿಷಯಗಳನ್ನು ನೀವು ಗಮನಿಸುತ್ತೀರ ಅಂತ ಅರ್ಥ.

ಇದನ್ನೂ ಓದಿ:

ಪುಸ್ತಕ:
ಅವಳು ಓದೋ ಹವ್ಯಾಸ ಹೊಂದಿದ್ದರೆ ಒಳ್ಳೆಯ ಪುಸ್ತಕ ಒಳ್ಳೆಯ ಆಯ್ಕೆ. ಇದು ನಿಮ್ಮ ಚಿಂತನೆಯ ಗಂಭೀರತೆಯನ್ನು ತೋರಿಸುತ್ತದೆ.

ಪ್ರೀತಿಯ ಪತ್ರ:
ಸಣ್ಣ ಪತ್ರದಲ್ಲಿ ಪ್ರೀತಿಯ ಎರಡು ಮಾತು ಬರೆಯಿರಿ. ಸರಳ ಪದಗಳು ದೊಡ್ಡ ಇಂಪ್ಯಾಕ್ಟ್ ಕೊಡುತ್ತವೆ.

ಮೊದಲ ಭೇಟಿಯಲ್ಲಿ ಗಿಫ್ಟ್‌ಗಿಂತ ಮುಖ್ಯವಾದದ್ದು ನಿಮ್ಮ ವರ್ತನೆ. ಸಮಯ ಪಾಲನೆ, ಸರಳ ಉಡುಪು ಮತ್ತು ಗೌರವಪೂರ್ಣ ಮಾತು ಇವುಗಳೇ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಸಣ್ಣ ಉಡುಗೊರೆಯೊಂದಿಗೆ ದೊಡ್ಡ ಮೆಚ್ಚುಗೆಯನ್ನೂ ಗೆಲ್ಲಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !