RELATIONSHIP | ದೇಶದಲ್ಲಿ ಡಿವೋರ್ಸ್ ಪ್ರಕರಣ ಹೆಚ್ಚಾಗೋದಕ್ಕೆ ಅಸಲಿ ಕಾರಣನೇ ಇದು!

ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುತ್ತಾರೆ. ಆದರೆ ಈಗ ಆ ಮಾತನ್ನು ಉಳಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಕಷ್ಟವಾಗುತ್ತಿದೆ. ಮದುವೆಯಾಗಿ ಒಂದು ಎರಡು ತಿಂಗಳಲ್ಲಿ ವಿಚ್ಛೇದನ ಪಡೆಯುತ್ತಿರುವುದು ತುಂಬಾ ಮಾಮೂಲಿಯಾಗಿದೆ.

ಪರಸ್ಪರ ಪ್ರೀತಿ, ಕಾಳಜಿ, ಆತ್ಮೀಯತೆ, ಸಲುಗೆ ಬದಲಾಗಿ ಜೀವನಶೈಲಿ, ಸಾಮಾಜಿಕ ಮೌಲ್ಯಗಳು, ತಂತ್ರಜ್ಞಾನ ಹಾಗೂ ಸ್ವತಂತ್ರದತ್ತ ಒಲವು ಹೆಚ್ಚಾಗುತ್ತಿದೆ. ವಿಚ್ಛೇದನದ ಮುಖ್ಯ ಕಾರಣಗಳು ಕೂಡ ಹೊಸ ರೀತಿಯಲ್ಲಿ ಹೊರಬರುತ್ತಿವೆ.

ಸಂವಹನದ ಕೊರತೆ
ಸರಿಯಾದ ಅಥವಾ ಸ್ಪಷ್ಟ ಸಂವಹನ ಇಲ್ಲದಿರುವುದು. ಭಾವನೆಗಳು ಮತ್ತು ಅಗತ್ಯತೆಗಳನ್ನು ಹಂಚಿಕೊಳ್ಳದಿರುವುದು. ಒಂದೇ ಮನೆಯಲ್ಲಿದ್ದರೂ ಅಪರಿಚಿತರಂತೆ ಬದುಕುತ್ತಿರುವುದು.

ನಿಷ್ಠೆಯ ಕೊರತೆ ಅಥವಾ ಭಾವನಾತ್ಮಕ ವಂಚನೆ
ದೈಹಿಕ ಅಥವಾ ಭಾವನಾತ್ಮಕ ಅನ್ಯೋನ್ಯತೆ. ಮದುವೆಯಲ್ಲಿ ಆತ್ಮತೃಪ್ತಿ ಇಲ್ಲದಿರುವುದರಿಂದ ಸಂಬಂಧದಿಂದ ದೂರವಿರುವುದು. ಪ್ರೀತಿಯನ್ನು ಹುಡುಕಿ ಬೇರೆ ಸಂಬಂಧಗಳನ್ನು ಪ್ರಾರಂಭಿಸುವುದು.

ಸಾಮಾಜಿಕ ಮಾಧ್ಯಮದ ಪ್ರಭಾವ
ಇತರರ ಜೀವನವನ್ನು ಹೋಲಿಸುವ ಪ್ರವೃತ್ತಿ. ಡೈರೆಕ್ಟ್ ಮೆಸೇಜ್‌ಗಳು ಅಥವಾ ಆನ್‌ಲೈನ್ ಸಂಪರ್ಕದಿಂದ ಉದ್ಭವಿಸುವ ಅನುಮಾನಗಳು.

ವೃತ್ತಿ ಮತ್ತು ವೈಯಕ್ತಿಕ ಉದ್ದೇಶಗಳ
ಕೆಲಸದ ಗುರಿಗಳು ಮತ್ತು ಕುಟುಂಬ ಜೀವನದ ನಡುವೆ ಅಸಮತೋಲನ. ಸಮಯದ ಕೊರತೆಯಿಂದ ಹತ್ತಿರವಿದ್ದೂ ದೂರವಿರುವುದು.

ಹೊಂದಾಣಿಕೆಯ ಕೊರತೆ
ಸರಿಯಾಗಿ ಪರಿಚಯವಾಗದೇ ಮದುವೆಯಾಗುವುದು. ಮೌಲ್ಯಗಳಲ್ಲಿ, ಆಸಕ್ತಿಗಳಲ್ಲಿ ಅಥವಾ ಗುರಿಗಳಲ್ಲಿ ವ್ಯತ್ಯಾಸ. ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಒದ್ದಾಡುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!