ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರು ಹೊಸವರ್ಷಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯೂ ತಯಾರಿ ನಡೆಸಿದೆ. ಈ ಸಂಬಂಧ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿ ಹೈಲೈಟ್ಸ್ ಹೀಗಿವೆ..
- ಬೆಂಗಳೂರಿನ ಕ್ಲಬ್‌ಗಳಿಗೆ ರಾತ್ರಿ ೧ ಗಂಟೆವರೆಗೆ ಮಾತ್ರ ಅವಕಾಶ
- ವೈನ್ ಹಾಗೂ ಲಿಕ್ಕರ್ ಶಾಪ್‌ಗಳು ಮಧ್ಯರಾತ್ರಿ ೧೨ ಗಂಟೆವರೆಗೆ ಮಾತ್ರ ತೆರೆದಿರಬೇಕು.
- ಫ್ಲೈಓವರ್‌ಗಳ ಮೇಲೆ ಸ್ಪೀಡ್ ರೈಡ್ ಹಾಗೂ ವ್ಹೀಲಿಂಗ್‌ಗೆ ಅವಕಾಶ ಇಲ್ಲ. ಅದಕ್ಕಾಗಿ ಏರ್‌ಪೋರ್ಟ್
- ಫ್ಲೈಓವರ್ ಹೊರತುಪಡಿಸಿ ಇನ್ನೆಲ್ಲ ಫ್ಲೈಓವರ್ ಬಂದ್ ಆಗಲಿವೆ.
- ವಾರದಿಂದ ಡ್ರಗ್ಸ್‌ಗೆ ಸಂಬಂಧಿಸಿದಂತೆ ಭಾರೀ ಪರಿಶೀಲನೆ ನಡೆದಿದೆ.
- ಅಧಿಕ ಲಿಕ್ಕರ್ ಶೇಖರಣೆ, ಅನಧೀಕೃತ ಮಾರಾಟ ಮಾಡುವಂತಿಲ್ಲ.
ಪೊಲೀಸ್ ಬಂದೋಬಸ್ತ್
ಭದ್ರತೆಗಾಗಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಓರ್ವ ಜಂಟಿ ಪೊಲೀಸ್ ಆಯುಕ್ತ, 15 ಡಿಸಿಪಿ, 45 ಎಸಿಪಿ, 160 ಪಿಐ, 600 ಸಬ್‌ಇನ್ಸ್‌ಪೆಕ್ಟರ್, 600 ಎಎಸ್‌ಐ, 1,800 ಹೆಡ್‌ಕಾನ್ಸ್‌ಟೆಬಲ್ಸ್, 5,200 ಕಾನ್ಸ್‌ಟೆಬಲ್ಸ್ ಕಾರ್ಯನಿರ್ವಹಿಸಲಿದ್ದಾರೆ.