ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಉಗ್ರರನ್ನು ಸಂಹಾರ ಮಾಡಲು ಭಾರತ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ʼಆಪರೇಷನ್ ಸಿಂದೂರ್ʼ ಹೆಸರಿಗಾಗಿ ಹಲವು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಭಾರತ ಆಪರೇಷನ್ ಸಿಂಧೂರ್ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಟ್ರೇಡ್‌ಮಾರ್ಕ್ ಪಡೆಯಲು ಮೊದಲ ಅರ್ಜಿ ಸಲ್ಲಿಸಿದೆ. ನಂತರ ಮನರಂಜನೆ, ಶಿಕ್ಷಣ, ಸಾಂಸ್ಕೃತಿಕ ಮತ್ತು ಮಾಧ್ಯಮ ಸೇವೆಗಳನ್ನು ಒಳಗೊಂಡಿರುವ ವರ್ಗ 41 ರ ಅಡಿಯಲ್ಲಿ ವಿಶೇಷ ಹಕ್ಕುಗಳನ್ನು ಬಯಸುವ ಇನ್ನೂ ಮೂವರು ಅರ್ಜಿ ಸಲ್ಲಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಬುಧವಾರ ಬೆಳಗ್ಗೆ 10:42ಕ್ಕೆ ಅರ್ಜಿ ಸಲ್ಲಿಸಿದರೆ ಮುಕೇಶ್ ಚೇತನ್ ಅಗರ್‌ವಾಲ್ ಬೆಳಗ್ಗೆ 11:25, ನಿವೃತ್ತ ಭಾರತೀಯ ವಾಯುಪಡೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಮಲ್ ಸಿಂಗ್ ಮಧ್ಯಾಹ್ನ 12.16, ದೆಹಲಿ ಮೂಲದ ವಕೀಲ ಅಲೋಕ್ ಕೊಠಾರಿ ಸಂಜೆ 6:27ಕ್ಕೆ ಅರ್ಜಿ ಹಾಕಿದ್ದಾರೆ.