ಡಿಸ್ನಿ ಜೊತೆ ಜಂಟಿ ಉದ್ಯಮ ಘೋಷಿಸಿದ ರಿಲಯನ್ಸ್‌: ಅಧ್ಯಕ್ಷರಾಗಿ ನೀತಾ ಅಂಬಾನಿ ನೇಮಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಿಯಲನ್ಸ್‌ ಇಂಡಸ್ಟ್ರೀಸ್‌ ಹಾಗೂ ವಾಲ್ಟ್‌ ಡಿಸ್ನಿ ಬುಧವಾರ ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾದ ವ್ಯವಹಾರಗಳನ್ನು ಸಂಯೋಜಿಸುವ ಜಂಟಿ ಉದ್ಯಮವನ್ನು ರೂಪಿಸಲು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕುವುದಾಗಿ ಘೋಷಣೆ ಮಾಡಿದೆ.

11,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಒಪ್ಪಿಕೊಂಡಿದೆ. ಈ ವಹಿವಾಟಿನ ಭಾಗವಾಗಿ, ವಯಾಕಾಮ್‌ 18ನ ಮಾಧ್ಯಮ ಉದ್ಯಮವನ್ನು ನ್ಯಾಯಾಲಯದ ಅನುಮೋದಿತ ವ್ಯವಸ್ಥೆಯ ಮೂಲಕ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ವಿಲೀನಗೊಳಿಸಲಾಗುತ್ತದೆ. ಎರಡೂ ಕಂಪನಿಗಳ ನಡುವಿನ ಸಹಕಾರ ವಿಚಾರವನ್ನು ಹೊರತಡುಪಡಿಸಿ, ಜಂಟಿ ಉದ್ಯಮದ ಮೌಲ್ಯವೇ 70,352 ಕೋಟಿ ರೂಪಾಯಿ ಆಗಿದೆ. ಒಮ್ಮೆ ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಈ ಜಂಟಿ ಉದ್ಯಮವನ್ನು ರಿಯಲನ್ಸ್‌ ಇಂಡಸ್ಟ್ರೀಸ್‌ ನಿಯಂತ್ರಿಸಲಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ನ ಪಾಲು ಶೇ. 16.34 ಆಗಿದ್ದರೆ, ರಿಲಯನ್ಸ್‌ನ ಮಾಧ್ಯಮ ವಿಭಾಗವಾಗಿರುವ ವಯಾಕಾಮ್‌18 ಶೇ. 46.82ರಷ್ಟು ಪಾಲು ಹೊಂದಿರಲಿದೆ. ಇನ್ನು ಡಿಸ್ನಿ ಶೇ. 36.84ರಷ್ಟು ಪಾಲು ಹೊಂದಿರಲಿದೆ.

ನೀತಾ ಅಂಬಾನಿ ಜೆವಿಯ ಅಧ್ಯಕ್ಷೆಯಾಗಲಿದ್ದು, ಉದಯ್ ಶಂಕರ್ ಉಪಾಧ್ಯಕ್ಷರಾಗಿ ಜಂಟಿ ಉದ್ಯಮಕ್ಕೆ ಕಾರ್ಯತಂತ್ರದ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಡಿ ಅಂಬಾನಿ ಈ ಬಗ್ಗೆ ಮಾಹಿತಿ ನೀಡಿದ್ದು, ‘ಇದು ಭಾರತೀಯ ಮನರಂಜನಾ ಉದ್ಯಮದಲ್ಲಿ ಹೊಸ ಯುಗವನ್ನು ಸೂಚಿಸುವ ಮಹತ್ವದ ಒಪ್ಪಂದವಾಗಿದೆ. ನಾವು ಯಾವಾಗಲೂ ಡಿಸ್ನಿಯನ್ನು ಜಾಗತಿಕವಾಗಿ ಅತ್ಯುತ್ತಮ ಮೀಡಿಯಾ ಗ್ರೂಪ್‌ ಎಂದೇ ಗೌರವಿಸುತ್ತೇವೆ ಮತ್ತು ರಾಷ್ಟ್ರದಾದ್ಯಂತ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಾಟಿಯಿಲ್ಲದ ವಿಷಯವನ್ನು ತಲುಪಿಸಲು ನಮ್ಮ ವ್ಯಾಪಕ ಸಂಪನ್ಮೂಲಗಳು, ಸೃಜನಶೀಲ ಸಾಮರ್ಥ್ಯ ಮತ್ತು ಮಾರುಕಟ್ಟೆ ಒಳನೋಟಗಳನ್ನು ಒಟ್ಟುಗೂಡಿಸಲು ಸಹಾಯ ಮಾಡುವ ಈ ಕಾರ್ಯತಂತ್ರದ ಜಂಟಿ ಉದ್ಯಮವನ್ನು ರೂಪಿಸಲು ನಾವು ಉತ್ಸುಕರಾಗಿದ್ದೇವೆ. ರಿಲಯನ್ಸ್ ಗುಂಪಿನ ಪ್ರಮುಖ ಪಾಲುದಾರರಾಗಿ ಡಿಸ್ನಿಯನ್ನು ನಾವು ಸ್ವಾಗತಿಸುತ್ತೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!