ಮೂರನೇ ತ್ರೈಮಾಸಿಕ ಲಾಭದಲ್ಲಿ 28 ಶೇಕಡಾ ಏರಿಕೆ ದಾಖಲಿಸಿದ ರಿಲಯನ್ಸ್‌ ಜಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಈಗಾಗಲೇ 5ಜಿ ಸೇವೆಗಳನ್ನು ಭಾರತದಾದ್ಯಂತ ವಿಸ್ತರಿಸುತ್ತಿರುವ ಟೆಲಿಕಾಂ ದೈತ್ಯ ರಿಲಯನ್ಸ್‌ ಜಿಯೋ 2022ರ ಡಿಸೆಂಬರ್‌ ತಿಂಗಳಲ್ಲಿ ಕೊನೆಗೊಳ್ಳುವ ಮೂರನೇ ತ್ರೈಮಾಸಿಕದ ಲಾಭದಲ್ಲಿ 28 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ. ಒಟ್ಟೂ 4,638 ರೂಪಾಯಿಗಳಷ್ಟು ಲಾಭವನ್ನು ಕಂಪನಿ ಗಳಿಸಿದೆ.

ಕಾರ್ಯಾಚರಣೆಗಳ ಆದಾಯವು 22,998 ಕೋಟಿ ರೂಪಾಯಿಗೆ ತಲುಪಿಗಿ ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 19,347 ಕೋಟಿ ರೂ.ಗಳಷ್ಟಿತ್ತು. ಕಾರ್ಯಾಚರಣೆಗಳ ಆದಾಯದಲ್ಲಿ 18.9 ಶೇಕಡಾದಷ್ಟು ಏರಿಕೆ ದಾಖಲಾಗಿದೆ.

ತ್ರೈಮಾಸಿಕದಲ್ಲಿ ನಿವ್ವಳ ಲಾಭದ ಪ್ರಮಾಣವು 17.1ಶೇಕಡಾದಷ್ಟಿದ್ದು ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 15.9 ಶೇಕಡಾದಷ್ಟಿತ್ತು.

ದೇಶದಲ್ಲಿ 5ಜಿ ಸೇವೆಗಳು ಪ್ರಾರಂಭವಾದಾಗಿನಿಂದ ರಿಲಯನ್ಸ್‌ ಜಿಯೋ 5ಜಿ ನೆಟ್ವರ್ಕ್‌ ವಿಸ್ತರಣೆಯ ಕಡೆ ಹೆಚ್ಚಿನ ಗಮನ ಕೊಟ್ಟಿದ್ದುಈಗಾಗಲೇ ಪ್ರಮುಖ ನಗರಗಳಲ್ಲಿ ಜಾರಿ ಮಾಡಿದೆ. ಇನ್ನೊಂದು ವರ್ಷದಲ್ಲಿ ಇಡೀ ದೇಶದಾದ್ಯಂತ 5ಜಿ ಜಾರಿಯಾಗಲಿದೆ ಯೆಂದು ಜಿಯೋ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!