ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ವಿದೇಶಕ್ಕೆ ಹೋಗಲು ದೆಹಲಿ ನ್ಯಾಯಾಯಲಯವು ಅನುಮತಿ ನೀಡಿದೆ.
₹ 200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗೆ ಜಾಕ್ವೆಲಿನ್ ಕೂಡ ಆರೋಪಿಯಾಗಿದ್ದು, ಜಾಮೀನು ವೇಳೆ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೇ ವಿದೇಶಕ್ಕೆ ಹೋಗಲು ಅನುಮತಿ ನೀಡಿರಲಿಲ್ಲ. ಇದೀಗ ಜಾಮೀನಿನ ಷರತ್ತಿನಲ್ಲಿ ನ್ಯಾಯಾಲಯವು ಮಾರ್ಪಾಡು ಮಾಡಿದೆ.
‘ದೇಶದಿಂದ ಹೊರಹೋಗುವ ಮೂರು ದಿನಗಳ ಮುನ್ನ ನ್ಯಾಯಾಲಯದ ಪೂರ್ವಾನುಮತಿ ಪಡೆಯುವ ಬದಲು ಜಾಕ್ವೆಲಿನ್ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ಗಮನಕ್ಕೆ ತರಬೇಕು’ ಎಂದೂ ನ್ಯಾಯಾಲಯವು ನಿರ್ದೇಶನ ನೀಡಿದೆ.
ಕಳೆದ ವರ್ಷ ನ. 15ರಂದು ಜಾಕ್ವೆಲಿನ್ ಅವರಿಗೆ ಜಾಮೀನು ಮಂಜೂರು ಮಾಡಿದ್ದರು.