ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ: ಸಂಚಾರ ಬದಲಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು-ಪುಣೆ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಧಾರವಾಡ ಬಳಿ ಎಲ್‌ಪಿಜಿ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗಿ ಗಂಟೆಗಟ್ಟಲೇ ಆತಂಕ ಸೃಷ್ಟಿಯಾದ ಘಟನೆನಡೆದಿದೆ.

ಎಚ್.ಪಿ. ಕಂಪನಿಗೆ ಸೇರಿದದ ಟ್ಯಾಂಕರ್ ಬೇಲೂರು ಕೈಗಾರಿಕಾ ಪ್ರದೇಶದ ಬಳಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಅಂಡರ್‌ಪಾಸ್‌ಗೆ ಬರುತ್ತಿದ್ದಂತೆ ಗ್ಯಾಸ್ ಸೋರಿಕೆಯಾಗಿದೆ. ಹೆದ್ದಾರಿ ಮೇಲೆ ವಾಹನಗಳ ಓಡಾಟ ನಿರ್ಬಂಧಿಸಲಾಗಿದ್ದು, ಬದಲಿ ಮಾರ್ಗ ಸೂಚಿಸಲಾಗಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ.

ಈ ಕುರಿತಾಗಿ ಬೆಳಗಾವಿ ಪೊಲೀಸ್​ ವರಿಷ್ಠಾಧಿಕಾರಿ ಡಾ.ಸಂಜೀವ್​​ ಪಾಟೀಲ್ ಮಾಹಿತಿ ನೀಡಿದ್ದು, ಒಟ್ಟು 4 ಮಾರ್ಗದಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಾರ್ಗ ಬದಲಾವಣೆ
ಬೆಳಗಾವಿಯಿಂದ ಕಿತ್ತೂರು-ತಡಕೋಡ-ಧಾರವಾಡ-ಹುಬ್ಬಳ್ಳಿಗೆ ಸಂಚಾರ
ಹಿರೇಬಾಗೇವಾಡಿ-ಬೈಲಹೊಂಗಲ ತಡಕೋಡ-ಧಾರವಾಡ ಮೂಲಕ ಸಂಚಾರ
ಸಂಕೇಶ್ವರ-ಹುಕ್ಕೇರಿ ಘಟಪ್ರಭಾ-ಗೋಕಾಕ್-ಧಾರವಾಡ ಮಾರ್ಗದಲ್ಲಿ ಸಂಚಾರ
ನಿಪ್ಪಾಣಿ-ಹುಕ್ಕೇರಿ-ಘಟಪ್ರಭಾ ಗೋಕಾಕ್-ಸವದತ್ತಿ ಮೂಲಕ ಸಂಚಾರ
ಬೆಳಗಾವಿ ಕಡೆಯಿಂದ ಪರ್ಯಾಯ ಮಾರ್ಗ ಬಳಸಿ ಧಾರವಾಡಕ್ಕೆ ಸಂಚರಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!