ಹೊಸದಿಗಂತ ವರದಿ, ಮೈಸೂರು:
ರಾಜಕೀಯಕೊಸ್ಕರ ಧರ್ಮದ ವಿಚಾರವನ್ನ ಬೀದಿಗೆ ತರಬಾರದು ಎಂದು ಶಾಸಕ ಎಸ್.ಎ.ರಾಮದಾಸ್ , ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದ್ದಾರೆ.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರ ಮಾತನಾಡುವಾಗ ಮಠಾಧಿಪತಿಗಳು ತಲೆ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಹೇಳಿರುವುದು ಬೇಸರದ ವಿಷಯ
ಸಿದ್ದರಾಮಯ್ಯ ಒಬ್ಬ ರಾಜಕೀಯ ಮುತ್ಸದ್ಧಿ, ಮುಖ್ಯಮಂತ್ರಿ ಆಗಿದ್ದವರು. ರಾಜ್ಯದ ಎಲ್ಲಾ ಜನರು ಅವರಿಗೆ ಒಂದೇ ಆಗಿರಬೇಕು. ಓಟಿಗೊಸ್ಕರವಾಗಿ, ಯಾರನ್ನೊ ಓಲೈಕೆ ಮಾಡಲು ಇನ್ನೊಬ್ಬರನ್ನ ಅಪಹಾಸ್ಯ ಮಾಡುವುದು ಒಳ್ಳೆಯದಲ್ಲ ಎಂದರು.
ನಮ್ಮ ಸಂಪ್ರದಾಯದoತೆ ಮಹಿಳೆಯರು ಸೆರಗು ಹಾಕಿಕೊಳ್ಳುತ್ತಾರೆ. ಯತಿಗಳು, ಮಠಾಧಿಪತಿಗಳು ವಸ್ತçವನ್ನು ತಲೆಮೇಲೆ ಹಾಕಿಕೊಳ್ಳುತ್ತಾರೆ. ಯಾವುದೋ ವ್ಯವಸ್ಥೆಗೆ ವಿವಾದ ಮಾಡುವುದನ್ನ ಸಿದ್ದರಾಮಯ್ಯರಿಂದ ನಾನು ನಿರೀಕ್ಷೆ ಮಾಡಿರಲಿಲ್ಲ. ಯಾರು ಇದರಿಂದ ದೊಡ್ಡವರಾಗುವುದಿಲ್ಲ. ತಪ್ಪಾಗಿದ್ರೆ ತಪ್ಪಾಗಿದೆ ಎಂದು ಕ್ಷಮೆ ಕೇಳುವುದು ಒಳ್ಳೆಯದು ಎಂದು ಸಲಹೆ ನೀಡಿದರು
ಅವರು ಏನು ಹೇಳಿದ್ದಾರೆ ಎಂಬುದು ಮಾಧ್ಯಮದ ಮುಂದೆ ಇದೆ. ಎಂಟು ಹೈ ಕೋರ್ಟ್ ಇದರ ಬಗ್ಗೆ ತೀರ್ಪು ಕೊಟ್ಟಿವೆ. ನ್ಯಾಯಾಲಯದ ವಿರುದ್ಧ ಯಾಕೆ ಮಾತನಾಡಬೇಕು. ಏನು 2023 ರ ಚುನಾವಣೆಗೊಸ್ಕರಾನಾ.? ಇಂತಹ ಹೇಳಿಕೆಯನ್ನು ಹಿರಿಯರಿಂದ ನಿರೀಕ್ಷೆ ಮಾಡಿರಲಿಲ್ಲ. ಹಾಗಾಗಿ ಅವರ ಹೇಳಿಕೆಯಿಂದ ಯಾರಿಗೆ ನೋವಾಗಿದೆಯೋ ಅವರು ಬಳಿ ಕ್ಷಮೆ ಕೇಳಬೇಕು ಎಂದು ನಿರೀಕ್ಷಿಸುವುದು ಸಹಜ. ಕ್ಷಮೆ ಕೇಳಿದರೆ ಒಳ್ಳೆಯದು ಎಂದು ಹೇಳಿದರು.