ಇಂದು ನಾಡಿನೆಲ್ಲೆಡೆ ಗೋವಿಂದನ ಸ್ಮರಣೆ: ವೈಕುಂಠ ಏಕಾದಶಿ ಆಚರಣೆ ಹೇಗೆ? ಪುರಾಣ ಕಥೆ ಏನು?

ಮಹಾವಿಷ್ಣು ಕಲ್ಪಾಂತ್ಯದಲ್ಲಿ ವಟಪತ್ರಶಾಯಿಯಾಗಿ ಯೋಗನಿದ್ರೆಯಲ್ಲಿದ್ದಾಗ ಆತನ ಕಿವಿ ಕರ್ಣಮಲದಿಂದ ಇಬ್ಬರು ರಾಕ್ಷಸರು ಹುಟ್ಟುತ್ತಾರೆ. ಬ್ರಹ್ಮನ ಪ್ರೇರಣೆಯು ಅವರೊಳಗೆ ವಾಯುಸಂಚಾರವಾಗುತ್ತದೆ. ಅವರು ರಾಕ್ಷಸರಂತೆ ಶಕ್ತಿಶಾಲಿಗಳಾಗುತ್ತಾರೆ ಮತ್ತು ದೇವಲೋಕವನ್ನೇ ವಶಪಡಿಸಿಕೊಳ್ಳುತ್ತಾರೆ.

ಬ್ರಹ್ಮ ಅವರನ್ನು ಸ್ಪರ್ಶಿಸಿ ನೋಡಲು ಒಬ್ಬ ಮೃದುವಾಗಿ ಕಂಡ ಅವನೇ ಮಧು. ಮತ್ತೊಬ್ಬ ಕಲ್ಲಿನಂತೆ ಕರ್ಕಶವಾಗಿ ಕಂಡ ಅವನೇ ಕೈಟಭ.

ಪರಾಕ್ರಮಿಗಳಾದ ಮಧು ಕೈಟಭ ಇವರನ್ನು ವಿಷ್ಣು ಸಂಹರಿಸಿದ. ವೈಕುಂಠ ಲೋಕದ ಉತ್ತರ ದ್ವಾರದ ಮೂಲಕ ಅವರನ್ನು ಪ್ರವೇಶಿಸುವಂತೆ ಮಾಡಿ ಸದ್ಗತಿಯನ್ನು ಕರುಣಿಸುತ್ತಾನೆ.

ಸದ್ಗತಿಯಲ್ಲಿ ಕರುಣಿಸಿದ್ದು ಏಕಾದಶಿಯಂದು. ಈ ಕಾರಣಕ್ಕೆ ವೈಕುಂಠ ಏಕಾದಶಿಯಂದು ವಿಶೇಷ ದ್ವಾರವನ್ನು ನಿರ್ಮಿಸಿ, ಅದರ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆಯುವ ಆಚರಣೆ ಇಂದು ಪ್ರಚಲಿತಕ್ಕೆ ಬಂದಿದೆ.

ಆದ್ದರಿಂದ, ವೈಕುಂಠ ಏಕಾದಶಿಯಂದು, ಭಕ್ತರು ವಿಷ್ಣು ದೇವಾಲಯಗಳಿಗೆ ಭೇಟಿ ನೀಡಿ, ಉಪವಾಸ ಮಾಡಿ, ಪೂಜೆ ಸಲ್ಲಿಸುತ್ತಾರೆ. ಈ ದಿನದಂದು, ದೇವಾಲಯಗಳಲ್ಲಿ ವಿಶೇಷವಾದ ವೈಕುಂಠ ದ್ವಾರವನ್ನು ನಿರ್ಮಿಸಲಾಗುತ್ತದೆ ಮತ್ತು ಭಕ್ತರು ಈ ದ್ವಾರದ ಮೂಲಕ ಹಾದುಹೋಗುವುದರಿಂದ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ.

ವೈಕುಂಠ ಏಕಾದಶಿಯು ಭಕ್ತರಿಗೆ ಆಧ್ಯಾತ್ಮಿಕ ಮುಕ್ತಿ ಮತ್ತು ಭಗವಂತ ವಿಷ್ಣುವಿನ ದಿವ್ಯ ಕೃಪೆಯನ್ನು ಅನುಭವಿಸಲು ಒಂದು ವಿಶೇಷ ಅವಕಾಶವನ್ನು ನೀಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!