ಬೇಕಾಗುವ ಸಾಮಾಗ್ರಿಗಳು:
4 ಪೀಸ್ -ಬ್ರೇಡ್
3 ಚಮಚದಷ್ಟು ತುಪ್ಪ
¾ ಕಪ್ ನೀರು
¾ ಕಪ್-ಸಕ್ಕರೆ
ಗೋಡಂಬಿ-8
ಮಾಡುವ ವಿಧಾನ:
ಮೊದಲಿಗೆ ಬ್ರೇಡ್ ನ ಸುತ್ತಲಿರುವ ಕಂದು ಬಣ್ಣದ ಪಟ್ಟಿಯನ್ನು ತೆಗೆಯಿರಿ. ನಂತರ ಬಾಣಲೆಗೆ 1 ಚಮಚ ತುಪ್ಪ ಹಾಕಿ ಗೋಡಂಬಿಯನ್ನು ಹುರಿಯಿರಿ. ನಂತರ ಪ್ಯಾನ್‌ನಲ್ಲಿ ಬ್ರೆಡ್ ತುಂಡನ್ನು ಇರಿಸಿ, ಅದನ್ನು ಎರಡೂ ಬದಿಗಳಲ್ಲಿ ಚೆನ್ನಾಗಿ ಟೋಸ್ಟ್ ಮಾಡಿ ಮತ್ತು ಅದನ್ನು ಪ್ಲೇಟ್‌ನಲ್ಲಿ ಇರಿಸಿ. ನಂತರ ಅದೇ ಬಾಣಲೆಗೆ ಸಕ್ಕರೆ ಹಾಕಿ ನೀರು ಹಾಕಿ ಕುದಿಯಲು ಬಿಡಿ. ಇದು ಕುದಿಯಲು ಆರಂಭಿಸಿದಾಗ ಬ್ರೇಡ್ ಪೀಸ್ ಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕ್ರಮೇಣ ತುಪ್ಪವನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ. ತುಪ್ಪ ತಳಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ರುಚಿಕರವಾದ ಬ್ರೆಡ್ ಹಲ್ವಾ ಸವಿಯಲು ಸಿದ್ದ.