Tuesday, July 5, 2022

Latest Posts

ಮಸೀದಿಗಳ ಧ್ವನಿವರ್ಧಕ ತೆಗೆಸಿ, ಇಲ್ಲವಾದಲ್ಲಿ ಮಸೀದಿಗಳೆದುರು ಹನುಮಾನ್‌ ಚಾಲಿಸಾ ಹಾಕುತ್ತೇವೆ: ರಾಜ್‌ ಠಾಕ್ರೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಸೀದಿಗಳಲ್ಲಿ ಹಾಕುವ ಧ್ವನಿ ವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್​ ಠಾಕ್ರೆ ಅವರು ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್​​ನಲ್ಲಿ ಆಯೋಜಿಸಿದ್ದ ರ್ಯಾಲಿಯನ್ನು ಬೆಂಬಲಿಗರನ್ನುದ್ದೇಶಿ ಮಾತನಾಡಿದ ರಾಜ್‌ ಠಾಕ್ರೆ, ನಾನು ಪ್ರಾರ್ಥನೆಗಳ ಅಥವಾ ಯಾವುದೇ ನಿರ್ದಿಷ್ಠ ಧರ್ಮದ ವಿರೋಧಿಯಲ್ಲ. ಆದರೆ ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ತೊಂದರೆಯಾಗುತ್ತದೆ. ಈ ವಿಚಾರವನ್ನು ನಾನು ವಿರೋಧಿಸುತ್ತೇನೆ. ಅಷ್ಟೆಲ್ಲ ದೊಡ್ಡದಾಗಿ ಧ್ವನಿ ಹೊರಡಿಸುವ ಅಗತ್ಯವೇನಿದೆ?. ಇದನ್ನು ನಿಲ್ಲಿಸದಿದ್ದ ರೆ ಮಸೀದಿ ಹೊರಗೆ ಜೋರಾಗಿ ಧ್ವನಿ ವರ್ಧಕ ಹಾಕಿ ಹನುಮಾನ್ ಚಾಲೀಸ ನುಡಿಸಲು ಆರಂಭಿಸುತ್ತವೆ ಎಂದು ರಾಜ್ ಠಾಕ್ರೆ ಎಚ್ಚರಿಸಿದ್ದಾರೆ.

ಮುಂಬೈನ ಕೆಲ ಮುಸ್ಲಿಂ ಕೊಳಗೇರಿಗಳಲ್ಲಿರುವ ಮದರಾಸಗಳಲ್ಲಿ ಪಾಕಿಸ್ತಾನಿಗಳಿದ್ದಾರೆ. ರಾಜ್ಯದ ಕೆಲ ರಾಜಕೀಯ ನೇತಾರರು ಅವರನ್ನು ತಮ್ಮ ಮತ ಬ್ಯಾಂಕ್ ಆಗಿಸಿಕೊಂಡಿದ್ದಾರೆ. ಈ ಮದರಾಸಗಳ ಮೇಲೆ ದಾಳಿ ನಡೆಸುವಂತೆ ಅವರು ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ. ಮುಂಬೈ ಪೊಲೀಸರಿಗೆ ಈ ಎಲ್ಲಾ ವಿಚಾರಗಳು ತಿಳಿದಿದ್ದರೂ ಕ್ರಮಕೈಗೊಳ್ಳದೆ ಸುಮ್ಮನಿದ್ದಾರೆ. ಕೆಲ ಶಾಸಕರು ಅವರಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಿ ಕೊಡುತ್ತಿದ್ದಾರೆ ಎಂದೂ ಠಾಕ್ರೆ ಆರೋಪಿಸಿದ್ದಾರೆ..
ರಾಜ್ಯದಲ್ಲಿ ಜಾತಿ ರಾಜಕೀಯ ತಂದಿದ್ದೇ ಎನ್​ಸಿಪಿ ಎಂದು ರಾಜ್​ ಠಾಕ್ರೆ ಶರದ್​ ಪವಾರ್​ ಅವರನ್ನು ಟೀಕಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss