ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ಅಕ್ಷಮ್ಯ ಅಪರಾಧ: ಮಂತ್ರಾಲಯ ಶ್ರೀ

ಹೊಸದಿಗಂತ ವರದಿ, ರಾಯಚೂರು :

ರಾಜ್ಯದ ಶಿವಮೊಗ್ಗಾ ಮತ್ತು ಬೀದರಿನಲ್ಲಿ ಇಬ್ಬರು ವಿಪ್ರ ಸಮಾಜದ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಕಿತ್ತು ಹಾಕಿ ಪರೀಕ್ಷೆಗೆ ಕೂಡುವುದಕ್ಕೆ ಅವಕಾಶ ನೀಡಿದ ಕ್ರಮ ಖಂಡನೀಯವಾದುದು ಎಂದು ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿ ಖಂಡಿಸಿದ್ದಾರೆ.

ಶ್ರೀಗಳು ಈ ಕುರಿತು ವಿಡಿಯೋ ಸಂದೇಶದ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತದ ಸಂವಿಧಾನದಲ್ಲಿ ಅವರವರ ಧರ್ಮವನ್ನು ಆಚರಿಸುವ ಹಕ್ಕನ್ನು ನೀಡಿದೆ. ಆದರೆ ಸಂವಿಧಾನ ಸಂವಿಧಾನ ಎಂದು ಹೇಳಿಕೊಂಡು ಸಂವಿಧಾನದಲ್ಲಿ ನೀಡಿರುವುದನ್ನು ಆಚರಿಸುವುದಕ್ಕೆ ಅವಕಾಶ ನೀಡದೆ ಅದನ್ನು ಹರಣ ಮಾಡುವಂತಹ ಕಾರ್ಯ ಮಾಡಿರುವುದು ಅಕ್ಷಮ್ಯ ಅಪರಾಧ ಇದು ದ್ವಂದ ನೀಲುವನ್ನು ತೋರಿಸುತ್ತದೆ.

ಇದು ಕೇವಲ ವಿಪ್ರ ಸಮಾಜದ ಸಮಸ್ಯೆಯಲ್ಲಿ. ಎಲ್ಲ ಧರ್ಮ, ಸಮುದಾಯಗಳ ಧರ್ಮ ವಿರೋಧಿ ಚಟುವಟಿಕೆಗಳು ಅತ್ಯಂತ ಹೇಯ ಕೃತ್ಯಗಳಾಗಿವೆ. ಇದು ಅಸಹ್ಯವಾದುದು ಈ ಕೃತ್ಯವನ್ನು ನಾವೆಲ್ಲ ಒಕ್ಕೂರಿಲಿನಿಂದ ಖಂಡಿತ್ತೇವೆ. ಪ್ರತಿಭಟಿಸುತ್ತೇವೆ. ಮತ್ತು ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಸರ್ಕಾರ ಎಚ್ಚರವಹಿಸಬೇಕು.

ಆ ವಿದ್ಯಾರ್ಥಿಯ ಭವಿಷ್ಯ ಹಾಳಾಗಿದೆ. ಧರ್ಮಕ್ಕೆ ಚ್ಯುತಿ ಬಂದಿದೆ. ಶಾಸಕರು ಇದು ತಪ್ಪಾಗಿದೆ ಎಂದು ಹೇಳುವುದು ಕಣ್ಣೊರೆಸುವ ತಂತ್ರವಾಗಿದೆ. ಇದೇ ರೀತಿ ಮುಂದುವರೆದರೆ ಧರ್ಮ ವಿರೋಧಿಗಳಿಗೆ ಜಾತ್ಯಾತೀತವಾಗಿ ಎಲ್ಲ ಧರ್ಮರಿಯರು ಸೇರಿ ಪ್ರತಿಭಟನೆ ಮಾಡುವ ಮೂಲಕ ಸರಿಯಾದ ಪಾಠವನ್ನು ಕಲಿಸಲಿದ್ದೇವೆ.

ಕರ್ನಾಟದ ಸರ್ವ ಧರ್ಮಗಳ ಶಾಂತಿಯ ತೋಟ ಎನಿಸಿಕೊಂಡಿದೆ. ಇಲ್ಲಿ ಧರ್ಮ ವಿರೋಧಿ ನೀತಿ ನಡೆಯುತ್ತಿವೆ. ಇಲ್ಲಿನೇ ಹಿಂಗಾದರೆ ಆಚಾರ, ವಿಚಾರ, ಧರ್ಮದ ಬಗ್ಗೆ ಇನ್ನೆಲ್ಲಿ, ಸಂಪ್ರದಾಯ, ವಿಶ್ವಾಸದ ಬಗ್ಗೆ ವಿಚಾರಮಾಡುವುದು ಎನ್ನುವುದು ತಿಳಿಯುವುದಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here