ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖ್ಯಾತ ಭರತನಾಟ್ಯ ಕಲಾವಿದೆ ಸರೋಜಾ ವೈದ್ಯನಾಥನ್ ಅವರು ಗುರುವಾರ ಬೆಳಗ್ಗೆ ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಕೆಲವು ಸಮಯದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪದ್ಮಭೂಷಣ ಪುರಸ್ಕೃತ ಸರೋಜಾ ಅವರು ಇಂದು ಬೆಳಗಿನ ಜಾವ 4 ಗಂಟೆಗೆ ನಿಧನರಾದರು ಎಂದು ಅವರ ಸೊಸೆ ಮತ್ತು ನೃತ್ಯಗಾರ್ತಿ ರಮಾ ವೈದ್ಯನಾಥನ್ ಅವರು ತಿಳಿಸಿದ್ದಾರೆ.
ಸರೋಜಾ ವೈದ್ಯನಾಥನ್ ಅವರಿಗೆ 2002 ರಲ್ಲಿ ಪದ್ಮಶ್ರೀ ಮತ್ತು 2013 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಶಾಸ್ತ್ರೀಯ ನೃತ್ಯ ಶಾಲೆಯಾದ ಗಣೇಶ ನಾಟ್ಯಾಲಯ ಸ್ಥಾಪಿಸಿ, 50 ವರ್ಷಗಳ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ.