ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
ಇತ್ತ ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ‘ಈ ಘಟನೆ ಸಂಬಂಧ ನಾನು ಮಾತನಾಡಲು ಹೋಗುವುದಿಲ್ಲ, ಈಗಾಗಲೇ ತನಿಖೆ ಶುರುವಾಗಿದೆ. ವರದಿ ಬಂದ ಮೇಲೆ ನೋಡಿಕೊಂಡು ಪ್ರತಿಕ್ರಿಯಿಸುವೆ ಎಂದರು.
ಚಿತ್ರನಟರು ಅಥವಾ ರಾಜಕೀಯದಲ್ಲಿ ಇರುವವರು ಯಾರೇ ಆಗಬಹುದು, ನಮ್ಮ ನಡೆಯನ್ನು ಸಾರ್ವಜನಿಕರು ಗಮನಿಸುತ್ತಿರುತ್ತಾರೆ. ಹಾಗಾಗಿ ಒಂದು ಹೆಜ್ಜೆ ಇಡುವಾಗಲೂ ಸೂಕ್ಷ್ಮವಾಗಿ ಇಡಬೇಕಾಗುತ್ತದೆ. ನಾವು ಸಾರ್ವಜನಿಕ ಬದುಕಿನಲ್ಲಿ ಇರುವಾಗ ತೆರೆದ ಪುಸ್ತಕದಂತೆ, ಹಾಗಾಗಿ ಇನ್ನೊಬ್ಬರಿಗೆ ಆದರ್ಶವಾಗಿ ಬದುಕಬೇಕು ಎಂದರು.