ನನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ರೇಣುಕಾಸ್ವಾಮಿ: ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾ ಸ್ವಾಮಿ ಕೊಲೆ ವಿಚಾರಕ್ಕೆಸಂಬಂಧಪಟ್ಟಂತೆ ದರ್ಶನ್‌ ಮತ್ತು ಇತರೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇತ್ತ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು ತಪ್ಪು ಎಂಬುದು ಕೆಲವರ ವಾದ. ಈ ರೀತಿ ರೇಣುಕಾಸ್ವಾಮಿ ಫೇಕ್ ಅಕೌಂಟ್‌ಗಳ ಮೂಲಕ ಸಾಕಷ್ಟು ಜನರಿಗೆ ಇದೇ ರೀತಿ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದ ಎನ್ನುವ ಆರೋಪ ಕೇಳಿಬರುತ್ತಿದೆ.

ಇದೀಗ ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ (ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ವಿಡಿಯೊ ಶೇರ್‌ ಮಾಡಿ, ಅಕೌಂಟ್‌ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ, ಪಸ್ತುತ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಕೊಲೆ ವಿಚಾರವಾಗಿ ಎಲ್ಲರಿಗೂ ಡಿಸ್ಟರ್ಬ್‌ ಕೂಡ ಆಗಿದೆ. ಇಲ್ಲಿ ಯಾರಿಗೂ ನಾನು ಸಪೋರ್ಟ್‌ ಮಾಡಲು ಬಂದಿಲ್ಲ. ದೇವರು ರೇಣುಕಾ ಸ್ವಾಮಿ ಕುಟುಂಬಕ್ಕೆ ಶಕ್ತಿ ಕೊಡಲಿ. ಆದರೆ ರೇಣುಕಾ ಸ್ವಾಮಿ ಅವರು ಈ ತರ ಹಲವರಿಗೆ ಮೆಸೆಜ್ ಕಳುಹಿಸಿದ್ದರು. ಈ ಬಗ್ಗೆ ಮಾರ್ಚ್‌ನಲ್ಲಿ ಪೊಲೀಸ್‌ ಸ್ಟೇಷನ್‌ನಲ್ಲಿ ಕಂಪ್ಲೇಟ್‌ ಕೂಡ ಆಗಿದೆ. ಅವರ ಅಕೌಂಟ್‌ ಈ ರೀತಿ ಗೌತಮ್‌ ಅನ್ನುವ ಹೆಸರಲ್ಲಿ ಇತ್ತು. ಈ ಅಕೌಂಟ್ ಇಂದ ಅದೇ ರೀತಿಯ ಕೆಟ್ಟ ಮೆಸೇಜ್‌ಗಳನ್ನು ಇನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು. ನಾನು ಅದರ ಸ್ಕ್ರೀನ್‌ ಶಾಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ ತಪ್ಪಾಗುತ್ತದೆ. ಹಾಗಾಗಿ ಹಾಕಲಿಲ್ಲ. ನನಗೆ ಆ ರೀತಿ ಮರ್ಮಾಂಗದ ಚಿತ್ರ ಆಗಲಿ, ಬೆತ್ತಲೆ ಫೋಟೊ ಆಗಲಿ ಅಥವಾ ಹಸ್ತ ಮೈಥುನ ವೀಡಿಯೋ ಆಗಲಿ ಬಂದರೆ ನಾನು ಕೂಡಲೇ ಆ ಅಕೌಂಟ್ ಬ್ಲಾಕ್ ಮಾಡ್ತೀನಿ. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ಅಲ್ಲಿ ನೋಡಿದಾಗ ಈ ಅಕೌಂಟ್ ಇದೆ. ಇಷ್ಟು ದಿನ ನಾನು ಸುಮ್ಮನಿದ್ದೆ. ಆದರೆ ಇದನ್ನು ನೋಡಿದ ಮೇಲೆ ಹೇಳಬೇಕು ಎಂದು ಮುಂದೆ ಬಂದೆ. ಭಯ ಅನ್ನಿಸಿತು. ಬೇಸರ ಆಗುತ್ತದೆ. ಅಂತಹ ಸುಂದರ ಹೆಂಡತಿ ಇರುವಾಗ ಈ ರೀತಿ ಸರೀನಾ? ಛೀ ಎನಿಸುತ್ತದೆ. ನನಗೆ ಪ್ರತಿದಿನ ಇಂತಹ ಸಾಕಷ್ಟು ಕೆಟ್ಟ ಮೆಸೇಜ್, ಟ್ರೋಲ್ ಎದುರಾಗುತ್ತಿರುತ್ತದೆ’ ಎಂದು ಚಿತ್ರಾಲ್ ವಿವರಿಸಿದ್ದಾರೆ.

ಚಿತ್ರಲ್‌ ರಂಗಸ್ವಾಮಿ ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಾಡಿ ಬಿಲ್ಡರ್‌ ಆಗಿಯೂ ಗುರುತಿಸಿಕೊಂಡಿದ್ದಾರೆ. 2017ರಿಂದ ಬಾಡಿ ಬಿಲ್ಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!