ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 70% ಎಫ್‌ಎಸ್‌ಎಲ್ ವರದಿ ಪೊಲೀಸರ ಕೈ ಸೇರಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಎಫ್‌ಎಸ್‌ಎಲ್‌ನ ಬಹುತೇಕ ಎಲ್ಲಾ ವರದಿಗಳು ಪೊಲೀಸರ ಕೈ ಸೇರಿದ್ದು, ಸದ್ಯ ಆರೋಪಿಗಳ ತಲೆಗೂದಲು ಸ್ಯಾಂಪಲ್ ವರದಿ ಖಾಕಿ ಕೈಗೆ ತಲುಪಿದೆ. ಇಬ್ಬರು ಆರೋಪಿಗಳಿಗೆ ಕೂದಲು ಸಂಕಷ್ಟ ತಂದೊಡ್ಡಿದ್ದು, ಕೊಲೆ ಮಾಡಿದ ಬಳಿಕ ರೇಣುಕಾಸ್ವಾಮಿ ಶವವನ್ನು ಬಿಸಾಡುವಾಗ ಸ್ಕಾರ್ಪಿಯೋ ಕಾರಲ್ಲಿ ನಾಲ್ವರು ಆರೋಪಿಗಳು ಹೋಗಿದ್ರು. ಆ ಸ್ಕಾರ್ಪಿಯೋ ಕಾರಲ್ಲಿ ಆರೋಪಿಗಳ ಕೂದಲು ಉದುರಿತ್ತು. ಅದನ್ನು ಸಂಗ್ರಹಿಸಿ ಡಿಎನ್‌ಎ ಟೆಸ್ಟ್‌ಗೆ ಕಳುಹಿಸಲಾಗಿತ್ತು. ಈಗ ಡಿಎನ್‌ಎ ವರದಿ ಬಂದಿದ್ದು ಇಬ್ಬರು ಆರೋಪಿಗಳ ಕೂದಲು ಮ್ಯಾಚ್ ಆಗಿದೆ. ಸದ್ಯ ತನಿಖೆ ಅಂತಿಮ ಘಟ್ಟ ತಲುಪಿದ್ದು, ಶೀಘ್ರವೇ ಚಾರ್ಜ್‌ಶೀಟ್ ಸಲ್ಲಿಕೆಯಾಗಲಿದೆ.
ಮರ್ಡರ್ ಕೇಸ್ ಸಂಬಂಧ ಪೊಲೀಸರು ನಾಲ್ಕು ಕ್ರೈಂ ಸೀನ್‌ಗಳನ್ನ ಗುರುತಿಸಿ ಬರೋಬ್ಬರಿ 160ಕ್ಕೂ ಹೆಚ್ಚು ಸಾಕ್ಷ್ಯಗಳನ್ನ ಸಂಗ್ರಹಿಸಿದ್ದಾರೆ. ಹಲವರ ಹೇಳಿಕೆಗಳನ್ನ ಪೊಲೀಸರು ದಾಖಲಿಸಿಕೊಂಡಿದ್ದಾರೆ.
17 ಆರೋಪಿಗಳ ಪ್ರತ್ಯೇಕ ಪ್ರೊಫೈಲ್ ಸಿದ್ಧಪಡಿಸಲು ಪೊಲೀಸರು ಮುಂದಾಗಿದ್ದಾರೆ. ಹುಟ್ಟಿದ್ದು ಯಾವಾಗ ಎನ್ನುವುದರಿಂದ ಹಿಡಿದು ಇಲ್ಲಿವರೆಗೂ ನಡೆದ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿಗಳ ಆದಾಯ ಏನು? ಏನ್ ಕೆಲಸ ಮಾಡ್ತಾ ಇದ್ದಾರೆ? ಯಾವ ವಿಳಾಸದಲ್ಲಿ ಇದ್ದಾರೆ?, ಜೊತೆಗೆ ಯಾವ ಆರೋಪಿ ವಿರುದ್ದ ಯಾವ ಸಾಕ್ಷ್ಯ ಇದೆ? ಅನ್ನೋದನ್ನು ಕೆದಕುತ್ತಿದ್ದಾರೆ. ಒಬ್ಬೊಬ್ಬರದ್ದೇ ಪ್ರತ್ಯೇಕ ಪ್ರೊಫೈಲ್ ಸಿದ್ದ ಮಾಡುತ್ತಿರುವುದಾಗಿ ಕೋರ್ಟ್‌ಗೆ ಮಾಹಿತಿ ಕೊಟ್ಟಿದ್ದಾರೆ.