ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಪವಿತ್ರ ಗೌಡ ಸೇರಿದಂತೆ ಐವರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ನವೆಂಬರ್ 21ಕ್ಕೆ ಮುಂದೂಡಿದೆ.
ಪವಿತ್ರ ಗೌಡ, ನಾಗರಾಜ್, ಲಕ್ಷ್ಮಣ್ ಮತ್ತು ಅನುಕುಮಾರ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯಕ್ಕೆ ಆಗಮಿಸಿದ ಪವಿತ್ರಾ ಗೌಡ ಅವರ ತಾಯಿ, ಮಗಳಿಗೆ ಜಾಮೀನು ಸಿಗದಿದ್ದಕ್ಕೆ ಬೇಸರಗೊಂಡು ನ್ಯಾಯಾಲಯದಿಂದ ನಿರ್ಗಮಿಸಿದ್ದಾರೆ.
21ರಂದು ಪ್ರಕರಣದ ಆರೋಪಿ ಎ2 ದರ್ಶನ್ ಜಾಮೀನು ಅರ್ಜಿ ವಿಚಾರಣೆಯೂ ನಡೆಯಲಿದೆ. ಸದ್ಯ ದರ್ಶನ್ ಜಾಮೀನಿನ ಮೇಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.