ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ ಅವರ ಹೇಳಿಕೆಯನ್ನು ಇಂದು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಗುವುದು.
ಕೊಲೆಯಾದ ದಿನ ಪಬ್ ನಲ್ಲಿ ನಟ ದರ್ಶನ್ ಮತ್ತು ಪ್ರದೋಶ್ ಜೊತೆ ಚಿಕ್ಕಣ್ಣ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿ ನಟ ಚಿಕ್ಕಣ್ಣ ಸೀದಾ ಮನೆಗೆ ತೆರಳಿದರು. ಒಂದು ವೇಳೆ ಇವರುಗಳ ಜೊತೆ ಶೆಡ್ ಗೆ ಹೋಗಿದ್ದರೆ ನಟ ಚಿಕ್ಕಣ್ಣ ಕೂಡ ಜೈಲುಪಾಲಾಗುವ ಸಾಧ್ಯತೆಯಿತ್ತು. ಪಾರ್ಟಿ ಮುಗಿಸಿ ಶೆಡ್‌ಗೆ ಹೋಗದೆ ಸೀದಾ ಮನೆಗೆ ಹೋಗಿದ್ದೆ ಎಂದು ನಟ ಚಿಕ್ಕಣ್ಣ ಪೊಲೀಸರಿಗೆ ತಿಳಿಸಿದ್ದಾರೆ. ಇಂದು ನ್ಯಾಯಾಧೀಶರ ಮುಂದೆ ನಟ ಚಿಕ್ಕಣ್ಣ ಕೂಡ ಹೇಳಿಕೆ ನೀಡಲಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ಚಿಕ್ಕಣ್ಣ ಅವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.