ಹೊಸದಿಗಂತ ವರದಿ, ಹುಬ್ಬಳ್ಳಿ:
ರಾಜ್ಯದಲ್ಲಿರುವ ಎಲ್ಲ ಕೃಷಿ ಮಾರುಕಟ್ಟೆಗಳ ಪುನಶ್ಚೇತನಗೊಳಿಸುವುದು ಹಾಗೂ ಎಪಿಎಂಸಿ ಕಾಯ್ದೆ ರದ್ದು ಪಡಿಸುವುದೇ ಸರ್ಕಾರ ಮುಖ್ಯ ಆದ್ಯತೆ ಎಂದು ಜವಳಿ, ಕಬ್ಬು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆಯ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಆದರೆ ಆಗ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಏನು ಮಾಡಲಿಲ್ಲ. ರೈತರು, ಸಾರ್ವಜನಿಕರು ಹಾಗೂ ವರ್ತಕರು ಹಿಂಪಡೆಯ ಬೇಕು ಆಗ್ರಹ ಮಾಡುತ್ತಿದ್ದಾರೆ. ಈ ದೆಸೆಯಲ್ಲಿ ನಮ್ಮ ಸರ್ಕಾರ ಚಿಂತನೆ ಮಾಡುತ್ತಿದ್ದು, ಬರುವ ಜುಲೈ ಅವೇಶನದಲ್ಲಿ ಬಿಲ್ ಪಾಸ್ ಮಾಡಿ ಪುನರ್ ಕಾಯ್ದೆ ಜಾರಿಗೆಗೊಳಿಸಲಾಗುವುದು ಎಂದರು.
ರಾಜ್ಯದಲ್ಲಿ ಹೆಚ್ಚು ಆದಾಯ ತರುವಂತ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗೆ ಒತ್ತುಕೊಡಲಾಗುತ್ತದೆ. ರೈತರಿಗೆ ಯೋಗ್ಯ ಬೆಲೆ ಸಿಗಬೇಕು. ಕಾಯ್ದೆ ತಿದ್ದು ಪಡಿಮಾಡಿದ್ದರಿಂದ ನಷ್ಟಕ್ಕೆ ಒಳಗಾದವು. ಈಗ ಅದನ್ನು ಪುನರ್ ಆರಮಭಿಸಿದರೆ ಅವಶ್ಯವಾಗಿ ಲಾಭಗಳಿಸುತ್ತವೆ ಎಂದು ತಿಳಿಸಿದರು.
ಎಪಿಎಂಸಿ ಕಾನೂನು ಜಾರಿಗೆ ಆದರೆ ಆದಾಯ ಹಾಗೂ ರೈತರಿಗೆ ಯೋಗ್ಯ ಬೆಲೆ ಸಿಗುತ್ತದೆ. ರೈತರ ಬೆಳೆದ ಬೆಳೆಯ ಬಗ್ಗೆ ಗೊಂದಲವಿರುವುದಿಲ್ಲ. ಜವಳಿ ಪಾರ್ಕ್ ತುಮಕೂರ ಕೈ ಬಿಟ್ಟು ಹೋಗಿದೆ. ಜವಳಿ ಪಾರ್ಕ್ ಅಭಿವೃದ್ಧಿ ಮಾಡುತ್ತೇವೆ. ಇರುವಂತಹ ಬೇಡಿಕೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇಲಾಖೆ ಇದೆ. ನೇಕಾರರಿಗೆ ಪ್ರೋತ್ಸಾಹಿಸುವುದು ಅವಶ್ಯಕತೆ ಇದೆ ಎಂದು ಹೇಳಿದರು.