April 13, 2026
Monday, April 13, 2026
spot_img

ನ್ಯೂಸ್‌ ರಿಪೋರ್ಟ್‌ ಮಾಡುವಾಗ ಪಕ್ಕದಲ್ಲೇ ಬಿದ್ದ ಬಾಂಬ್‌: ರಿಪೋರ್ಟರ್‌ ಜಸ್ಟ್‌ ಮಿಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಕ್ಷಿಣ ಲೆಬನಾನ್‌ನಲ್ಲಿ ಯುದ್ಧದ ಲೈವ್‌ನ್ನು ರಿಪೋರ್ಟ್‌ ಮಾಡುವಾಗಲೇ ಬಾಂಬ್‌ ಬಿದ್ದಿದೆ. ರಿಪೋರ್ಟರ್‌ ಅದೃಷ್ಟವಶಾತ್‌ ಪಾರಾಗಿದ್ದಾರೆ.

ರಷ್ಯಾ ಮಾಧ್ಯಮದ ವರದಿಗಾರ ಸ್ಟೀವ್ ಸ್ವೀನಿ ಹಾಗೂ ಅವರ ಕ್ಯಾಮೆರಾಮಾನ್‌ ಅಲಿ ರಿಡಾ ರಿಪೋರ್ಟ್‌ ಮಾಡುವ ವೇಳೆ ಪಕ್ಕದಲ್ಲೇ ಇಸ್ರೇಲ್‌ ಕ್ಷಿಪಣಿ ಬಿದ್ದಿದೆ. ಬರೀ 10 ಮೀಟರ್‌ ಅಂತರದಲ್ಲಿ ಬಾಂಬ್ ಬಿದ್ದಿದ್ದು, ಜೀವ ಉಳಿದಿದ್ದು ಅದೃಷ್ಟವೇ ಸರಿ.

ಬಾಂಬ್‌ ಬೀಳುತ್ತಿದ್ದಂತೆಯೇ ಇಬ್ಬರೂ ಓಡಿದ್ದಾರೆ. ಇದರಿಂದಾಗಿ ಗಾಯಗಳಾಗಿವೆ ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಡಾ ಅವರು ನಾವು ಮಾಧ್ಯಮ ಪ್ರತಿನಿಧಿಗಳ ಸಮವಸ್ತ್ರ ಧರಿಸಿದ್ದರೂ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !