ಅಮರನಾಥದಲ್ಲಿ ಮುಂದುವರೆದ ರಕ್ಷಣಾ ಕಾರ್ಯ : 15,000 ಯಾತ್ರಾರ್ಥಿಗಳ ಸ್ಥಳಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮೇಘ ಸ್ಪೋಟಕ್ಕೆ ತುತ್ತಾಗಿರುವ ಜಮ್ಮು ಕಾಶ್ಮೀರದ ಅಮರನಾಥದಲ್ಲಿ ರಕ್ಷಣಾ ಕಾರ್ಯ ಮುಂದುವರೆಯುತ್ತಿದೆ. ಭಾರತೀಯ ಸೇನೆಯ ವತಿಯಿಂದ ಅಪಾಯದಲ್ಲಿ ಸಿಲುಕಿರುವ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಗಾಯಾಳುಗಳನ್ನು ಏರ್‌ ಲಿಫ್ಟ್‌ ಮಾಡಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಸಾವನ್ನಪ್ಪಿರುವ 16 ಮಂದಿಯ ಪಾರ್ಥಿವ ಶರೀರಗಳನ್ನು ಸೇನಾ ಹೆಲಿಕಾಪ್ಟರ್‌ ಬಳಸಿ ರವಾನೆ ಮಾಡಲಾಗಿದೆ. ಅಪಾಯದಲ್ಲಿ ಸಿಲುಕಿರುವ ಸುಮಾರು 15,000 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲಾಗಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ. 40 ಜನ ನಾಪತ್ತೆಯಾಗಿದ್ದು ಅವರನ್ನು ಹುಡುಕುವ ಕಾರ್ಯ ನಡೆಯುತ್ತಿದೆ. ದೇವಾಲಯದ ಎರಡು ಕಡೆಗಳಿಂದ ಹಠಾತ್‌ ಆಗಿ ರಭಸವದಲ್ಲಿ ನೀರಿನ ಅಲೆಗಳು ಪ್ರವಹಿಸಿದ ಪರಿಣಾಮ ಯಾತ್ರಾರ್ಥಿಗಳು ತಂಗಿದ್ದ ಡೇರೆಗಳುಕೊಚ್ಚಿಕೊಂಡು ಹೋಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸೇನಾ ಹೆಲಿಕಾಪ್ಟರ್‌ಗಳನ್ನು ಸೇವೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!