ಮಿಸ್ ಇಂಡಿಯಾದಲ್ಲಿ ಮೀಸಲಾತಿ: ‘ಇದು ಬಾಲ ಬುದ್ಧಿಯ ವಿಷಯವಲ್ಲ’ ಎಂದು ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಿಸ್ ಇಂಡಿಯಾ ವಿಜೇತರ ಪಟ್ಟಿಯಲ್ಲಿ ದಲಿತ, ಬುಡಕಟ್ಟು ಅಥವಾ ಒಬಿಸಿ ಸಮುದಾಯದ ಮಹಿಳೆ ಇಲ್ಲ ಎಂದು ರಾಹುಲ್ ಗಾಂಧಿ ಅವರ ಹೇಳಿಕೆಗೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಅವರು ಮಿಸ್​​ ಇಂಡಿಯಾ ಸ್ಪರ್ಧೆಗಳು, ಚಲನಚಿತ್ರಗಳು, ಕ್ರೀಡೆಗಳಲ್ಲಿಯೂ ಮೀಸಲಾತಿ ಬಯಸಿದ್ದಾರೆ. ಇದು ಮಕ್ಕಳ ಬುದ್ಧಿಯ ವಿಷಯವಲ್ಲ ಜತೆಗೆ ಅವರನ್ನು ಪ್ರೋತ್ಸಾಹಿಸುವವರದ್ದೂ ಅಷ್ಟೇ ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದ್ದಾರೆ. ರಾಷ್ಟ್ರವ್ಯಾಪಿ ಜಾತಿಗಣತಿಗೆ ಸಂಬಂಧಿಸಿದಂತೆ ರಾಹುಲ್​ಗಾಂಧಿ ಅವರು ತಮ್ಮ ಹೊಸ ಟೀಕೆಗಳೊಂದಿಗೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಆದ್ರೆ ರಾಹುಲ್​​​ ಗಾಂಧಿ ಅವರೇ ನಮ್ಮ ದೇಶವನ್ನು ವಿಭಜಿಸಲು ಸಾಧ್ಯವಿಲ್ಲ. ಐಎಎಸ್, ಐಪಿಎಸ್, ಐಎಫ್‌ಎಸ್, ಎಲ್ಲಾ ಉನ್ನತ ಸೇವೆಗಳ ನೇಮಕಾತಿಯಲ್ಲಿ ಮೀಸಲಾತಿಯನ್ನು ಬದಲಾಯಿಸಲು ಸುಪ್ರೀಂಕೋರ್ಟ್‌ಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರಗಳು ಮಿಸ್ ಇಂಡಿಯಾ ಅಭ್ಯರ್ಥಿಗಳನ್ನು, ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ಅಥವಾ ಚಲನಚಿತ್ರಗಳಿಗೆ ನಟರನ್ನು ಆಯ್ಕೆ ಮಾಡುವುದಿಲ್ಲ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

  1. ಈ ಮಂತ್ರಿಗೆ ರಾಹುಲ್ ಗಾಂಧಿ ಎತ್ತಿದ ಪ್ರಶ್ನೆಯ ಹಿಂದಿನ ಕಾಳಜಿ ಅರ್ಥ ಆಗಿರಲಿಕ್ಕಿಲ್ಲ,,ಆಗಲು ಸಾಧ್ಯವೇಯಿಲ್ಲ ,, ಯಾಕೆಂದ್ರೆ ಇವುಗಳಿಗೆ ಸ್ವಂತ ವಿಚಾರಮಾಡುವ ಶಕ್ತಿ ಪಕ್ಷ ಸೇರಿದಾಗಿನಿಂದಲೆ ಹೈಜಾಕ್ ಆಗಿ ಹಾವಿನಪುರದ ಐಸಿಯು ನಲ್ಲಿಟ್ಟುರುತ್ತಾರೆ,, ಹೇಳಿದಷ್ಟು ಮಾತಾಡಬೇಕು ಮಾಡಬೇಕು,, ಅವರಿಗೆ ಬಾಲಬುದ್ಧಿಯಾದರೂ ಇದೆ,, ತನಗೆ ಏನಿದೆ ಕೋಪಡಿ ಖಾಲಿ,,ಬರೀ ಬುರುಡೆ ಮಾತ್ರ,, ಇಂಥಾ ಪ್ರಕಾಂಡ ಪಂಡಿತರು ಸಂಪುಟದಲ್ಲಿ ದೇಶದ ಗತಿ ಅಧೋಗತಿ,, ಯಥಾ ರಾಜ ತಥಾ ಶಿಷ್ಯ

  2. ಬಹು ಕಾಲದಿಂದಲೂ ಭಾರತದ ಕ್ರಿಕೆಟ್ ತಂಡದಲ್ಲಿ ಯಾಕೆ ಒಂದೇ ವರ್ಗದ ಜನರಿದ್ದಾರೆ , ಅಲ್ಲಿ ವಿನೋದ್ ಕಾಂಬಲೆ, ಕಪಿಲ್ ದೇವ್ , ರೋಜರ್ ಬಿನ್ನಿ, ಕೀರ್ತಿಅಜಾದ್, ಇತ್ಯಾದಿ ಅಂಥವರು ಆಯ್ಕೆ ಯಾಗಿದ್ದೆ ಒಂದು ಪವಾಡ . ಈ ಪ್ರಶ್ನೆ ಮೊದಲೇ ಏಳಬೇಕಿತ್ತು , ತುಂಬಾ ತಡವಾದರೂ ರಾಹುಲ್ ಗಾಂಧಿ ಹೇಳಿರುವುದು ನಮ್ಮಂಥ ಬಹುಸಂಖ್ಯಾತರ ಮನಸಿನ ಪ್ರಶ್ನೆ , ಜೈ ಭೀಮ್ ,

LEAVE A REPLY

Please enter your comment!
Please enter your name here

error: Content is protected !!