ಅಮೇಜಾನ್ ಪೇ ಸಂಸ್ಥೆಗೆ 3 ಕೋಟಿ ದಂಡ ವಿಧಿಸಿದ ಭಾರತೀಯ ರಿಸರ್ವ್ ಬ್ಯಾಂಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಪ್ರೀಪೇಡ್ ಪೇಮೆಂಟ್ ಇನ್ಸ್​​ಟ್ರೂಮೆಂಟ್ಸ್ (PPI- Prepaid Payment Instrument) ಮತ್ತು ಕೆವೈಸಿ (KYC- Know Your Customer) ನಿಯಮವನ್ನು ಉಲಂಘಿಸಿದ ಅಮೇಜಾನ್ ಪೇ ಸಂಸ್ಥೆ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ 3.06 ಕೋಟಿ ರೂನಷ್ಟು ದಂಡ ವಿಧಿಸಿದೆ.
ಈ ಕುರಿತು ಆರ್​ಬಿಐ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದೆ.
ಪ್ರೀಪೇಡ್ ಪೇಮೆಂಟ್ ಇನ್ಸ್​​ಟ್ರುಮೆಂಟ್ಸ್ (ಪಿಪಿಐ) ಮತ್ತು ಕೆವೈಸಿ ವಿಚಾರದಲ್ಲಿ ಕೆಲ ನಿಯಮಗಳಿಗೆ ಬದ್ಧವಾಗದ ಅಮೇಜಾನ್ ಪೇ ಪ್ರೈ ಲಿ ಸಂಸ್ಥೆಯ ಮೇಲೆ ಆರ್​ಬಿಐ 3,06,66,000 ರೂ ದಂಡ ವಿಧಿಸಿದೆ ಎಂದು ಆರ್​ಬಿಐ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!