ನೆಲದಲ್ಲಿದ್ದ ತ್ರಿವಣ್ಣ ಧ್ವಜಕ್ಕೆ ಗೌರವ: ಬ್ರಿಕ್ಸ್ ಶೃಂಗಸಭೆಯಲ್ಲಿ ವಿಶ್ವಕ್ಕೆ ಮೋದಿಯ ರಾಷ್ಟ್ರ ಪ್ರೇಮ ಪಾಠ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಆಫ್ರಿಕಾದ ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ನಡೆದ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತೊಂದು ಅಪರೂಪದ ಕ್ಷಣಕ್ಕೆ ಕಾರಣರಾದರು.

ಬ್ರಿಕ್ಸ್‌ ಶೃಂಗದಲ್ಲಿ ನಾಯಕರು ನಿಲ್ಲಬೇಕಾದ ಸ್ಥಳ ಗುರುತಿಸಲು ಆಯಾ ದೇಶದ ಧ್ವಜಗಳನ್ನು ಹಾಕಲಾಗಿತ್ತು. ಈ ವೇಳೆ ತ್ರಿವಣ್ಣ ಧ್ವಜ ಕಂಡ ಪ್ರಧಾನಿ ಮೋದಿ ತಕ್ಷಣವೇ ಧ್ವಜವನ್ನು ಕೈಗೆತ್ತಿಕೊಂಡು ತಮ್ಮ ಬಳಿ ಇಟ್ಟುಕೊಂಡರು. ಪಕ್ಕದಲ್ಲಿ ನಿಂತಿದ್ದ ಸೌತ್‌ ಆಫ್ರಿಕಾ ಅಧ್ಯಕ್ಷ ರಮಾಫೋಸಾ ಪ್ರಧಾನಿ ಮೋದಿ ನಡೆಯನ್ನು ಗಮನಿಸಿ ತಕ್ಷಣ ತಾವು ಕೂಡ ತಮ್ಮ ದೇಶದ ಧ್ವಜವನ್ನು ಕೈಯಲ್ಲಿ ಎತ್ತಿಕೊಂಡರು.
ಈ ಘಟನೆ ಮೂಲಕ ಪ್ರಧಾನಿ ಮೋದಿ ಅವರ ರಾಷ್ಟ್ರಪ್ರೇಮ ಮತ್ತೊಮ್ಮೆ ವಿಶ್ವದ ಗಮನ ಸೆಳೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!