ಹೊಸದಿಗಂತ ಡಿಜಿಟಲ್ ಡೆಸ್ಕ್:
2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಜಾರ್ಜಿಯಾ ರಾಜ್ಯದ ಚುನಾವಣಾ ಫಲಿತಾಂಶವನ್ನು ತಿರುಚಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಜಾರ್ಜಿಯಾ ಕೋರ್ಚ್‌ಗೆ ಶರಣಾಗುವುದಾಗಿ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಬರೆದುಕೊಂಡಿದು, ‘ನಿಮಗೆ ನಂಬಲು ಸಾಧ್ಯವೇ?, ಬಂಧಕನಕ್ಕೊಳಪಡಲು ನಾನು ಗುರುವಾರ ಜಾರ್ಜಿಯಾದ ಅಂಟ್ಲಾಂಟಾಗೆ ಹೋಗುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಅಕ್ರಮಕ್ಕೆ ಸಂಬಂಧಿಸಿದಂತೆ ಕೋರ್ಚ್ 1.65 ಕೋಟಿ ರು. ಬಾಂಡ್ ನಿಗದಿ ಪಡಿಸಿದೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಟ್ರಂಪ್ 4ನೇ ಬಾರಿ ನ್ಯಾಯಾಲಯಕ್ಕೆ ಶರಣಾಗುತ್ತಿದ್ದಾರೆ. ಅಲ್ಲದೇ ಅಮೆರಿಕ ಅಧ್ಯಕ್ಷರಾಗಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಮೊದಲಿಗ ಎಂಬ ಕುಖ್ಯಾತಿಗೂ ಟ್ರಂಪ್ ಪಾತ್ರರಾಗಿದ್ದಾರೆ.
ಟ್ರಂಪ್ ಕೋರ್ಚ್‌ಗೆ ಹಾಜರಾಗುವ ಸಮಯದಲ್ಲಿ ಕೋರ್ಚ್ ಆವರಣದಲ್ಲಿ ಲಾಕ್ಡೌನ್ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಜಿಯಾದಲ್ಲಿ 2020ರ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡಲು ಟ್ರಂಪ್ ಪಿತೂರಿ ನಡೆಸಿದ್ದರು ಎಂದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.