ಲಾಲು ಹೇಳಿಕೆಗೆ ತಿರುಗೇಟು: ಬಿಜೆಪಿಯಿಂದ ‘ಮೋದಿ ಕಾ ಪರಿವಾರ್’ ಅಭಿಯಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೋದಿ ಹಿಂದು ಅಲ್ಲ ಅವರಿಗೆ ಪರಿವಾರವಿಲ್ಲ ಎನ್ನುವ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್(Lalu Prasad Yadav) ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು,ಬಿಜೆಪಿಯ ಹಿರಿಯ ನಾಯಕರು ತಮ್ಮ ಸಾಮಾಜಿಕ ಮಾಧ್ಯಮದ ಹೆಸರುಗಳಿಗೆ ‘ಮೋದಿ ಕಾ ಪರಿವಾರ್’ ಅನ್ನು ಸೇರಿಸಿದ್ದಾರೆ. ಈ ಮೂಲಕ ಆಂದೋಲನವನ್ನೇ ಶುರುಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ತಮ್ಮ ಹೆಸರನ್ನು ‘ಮೋದಿ ಕಾ ಪರಿವಾರ್’ (ಮೋದಿ ಕುಟುಂಬ) ಎಂದು ಬದಲಾಯಿಸಿದ್ದಾರೆ.

ದೇಶದ ಬಹುತೇಕ ಬಿಜೆಪಿ ನಾಯಕರು ಅಭಿಯಾನಕ್ಕೆ ಕೈ ಜೋಡಿಸಿದ್ದು ತಾವೂ ಸಹ ಮೋದಿ ಪರಿವಾರದವರು ಎಂದು ಬರೆದುಕೊಂಡಿದ್ದಾರೆ. ಲಾಲೂ ಆರೋಪಕ್ಕೆ ತೆಲಂಗಾಣದ ಆದಿಲಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಿರುಗೇಟು ನೀಡಿದ್ದ ಪ್ರಧಾನಿ ಮೋದಿ, ದೇಶದಲ್ಲಿನ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕುಟುಂಬ ರಾಜಕಾರಣ ನಡೆಸುತ್ತಿರುವವರಿಗೆ ಹಲವು ಮುಖಗಳಿರಬಹುದು ಆದರೆ ಸುಳ್ಳು ಮತ್ತು ಲೂಟಿ ಮಾಡುವುದು ಕುಟುಂಬ ರಾಜಕಾರಣದಲ್ಲಿ ತೊಡಗಿರುವವರಲ್ಲಿ ಕಾಣುವ ಸಾಮಾನ್ಯ ಅಂಶ ಎಂದು ಮೋದಿ ಗುಡುಗಿದ್ದರು. ಇದಷ್ಟೇ ಅಲ್ಲದೇ ದೇಶದ 140 ಕೋಟಿ ಮಂದಿ ತಮ್ಮ ಪರಿವಾರದವರೆಂದು ಮೋದಿ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!