ಭರವಸೆಯಿಡಿ, ದಕ್ಷಿಣ ಭಾರತದಲ್ಲೇ ಅಭಿವೃದ್ದಿಯಲ್ಲಿ ಕರ್ನಾಟಕ ನಂ.1 ಆಗಲಿದೆ: ಅಮೀತ್ ಶಾ

ಹೊಸದಿಗಂತ ವರದಿ, ಬಳ್ಳಾರಿ:

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಒಂದು ಬಾರಿ ಮೋದಿಜೀ ಹಾಗೂ ಬಿಎಸ್ ವೈ ಅವರ ಮೇಲೆ ಭರವಸೆಯಿಡಿ, 5 ವರ್ಷದಲ್ಲಿ ಬ್ರಷ್ಟಾಚಾರ ಮುಕ್ತ ಮಾಡುತ್ತೇವೆ, ದಕ್ಷಿಣ ಭಾರತದಲ್ಲೇ ಅಭಿವೃದ್ದಿಯಲ್ಲಿ ರಾಜ್ಯ ನಂ.1 ಆಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಹೇಳಿದರು.

ಜಿಲ್ಲೆಯ ಸಂಡೂರು ಪಟ್ಟಣದ ಎಸ್ ಆರ್ ಎಸ್ ಶಾಲೆ ಮೈದಾನದ ಶ್ರೀ ಕ್ಷೇತ್ರ ಸ್ಕಂದಸಿರಿ ವೇದಿಕೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿಯೇ ಭರವಸೆ, ಸಾರ್ವಜನಿಕ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಚುನಾವಣೆ ಸಮೀಪಿಸುತ್ತಿದ್ದು, ಜೆಡಿಎಸ್, ಕಾಂಗ್ರೆಸ್ ಆಟ ಶುರುವಾಗಿದೆ, ಇವೆರಡು ಪಕ್ಷಗಳು ಕುಟುಂಬದ ಪಕ್ಷವಾಗಿವೆ, ಇಂತಹ ಪಕ್ಷಗಳಿಂದ ಜನರ ಕಲ್ಯಾಣ ಆಗಲು ಹೇಗೆ ಸಾಧ್ಯ. ಈ ಬಾರಿ ಬಹುಮತಕ್ಕಾಗಿ ಕುಸ್ತಿ ನಡೆದಿದೆ. ಜೆಡಿಎಸ್ ಹೋಗುವ ಒಂದೊಂದು ಮತಗಳು ಕಾಂಗ್ರೆಸ್ ಗೆ ಹೋಗಲಿವೆ, ಕಾಂಗ್ರೆಸ್ ಗೆ ಹೋಗುವ ಮತಗಳು ಸಿದ್ದರಾಮಯ್ಯಗೆ ಹೋಗಲಿದೆ, ಸಿದ್ದರಾಮಯ್ಯದ್ದು, ಎಟಿಎಂನಂತೆ ಸರ್ಕಾರವಿದ್ದಂತೆ ಎಂದು ವ್ಯಂಗವಾಡಿದರು.

ಪಿಎಫ್ಐ ಸಂಘಟನೆಯನ್ನು ನಾವು ನಿಷೇಧಿಸಿದ್ದೇವೆ, ಈ ಹಿಂದೆ ಇದೇ ಪಿಎಫ್ಐ ಸಂಘಟನೆ ಪ್ರಮುಖರ ಮೇಲಿದ್ದ ಸಾವಿರಾರು ಕೇಸ್ ಗಳನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡದಿದೆ, ಇದು ಅವರಿಗೆ ನಮಗಿರುವ ವ್ಯತ್ಯಾಸ, ಅಯೋದ್ಯಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿಜೀ ಅವರು ಶಿಲಾನ್ಯಾಸ ಮಾಡಿದ್ದು, ಶೀಘ್ರದಲ್ಲೇ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದರು.

ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರ ಮಧ್ಯೆ ಸಿ.ಎಂ.ಕುರ್ಚಿಗಾಗಿ ಜಗಳ ಶುರುವಾಗಿದೆ, ಕರ್ನಾಟಕ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಇಂತವರಿಂದ ಹೇಗೆ ಸಾಧ್ಯ, ನಮ್ಮ ಮೋದಿಜೀ ಅವರು ಕೊರೋನಾ ವೇಳೆ ದೇಶದ130ಕೋಟಿ ಜನರಿಗೆ ಉಚಿತ ವ್ಯಾಕ್ಸಿನ್ ನೀಡಿದರು. ನಿತ್ಯ ಭಯದಲ್ಲಿ ದಿನಗಳನ್ನು ಕಳೆಯುತ್ತಿದ್ದ ಜನರಲ್ಲಿ ಆತಂಕವನ್ನು ದೂರ ಮಾಡಿದ ಕೀರ್ತಿ ನಮಗಿದೆ. ದೇಶದ ಪ್ರತಿಯೋಬ್ಬ ಪ್ರಜೆಯೂ ನೆಮ್ಮದಿಯಿಂದ ಮೂರು ಒಪ್ಪತ್ತಿನ ಊಟ ಮಾಡಬೇಕು ಎಂದು 5ಕೇ ಅಕ್ಕಿ, ಜೋಳ, ಗೋದಿ, ರಾಗಿ ಸೇರಿ ಇತರೇ ಧಾನ್ಯಗಳನ್ನು ನಿಡಲಾಗುತ್ತಿದೆ, ದೇಶದ ಅನ್ನದಾತ ಪ್ರತಿ ರೈತರ ಖಾತೆಗೆ ವರ್ಷಕ್ಕೊಮ್ಮೆ 6 ಸಾವಿರ ರೂ.ಹಣ ನೆರವಾಗಿ ಖಾತೆಗೆ ಜಮಾ ಮಾಡಲಾಗುತ್ತಿದೆ ಇದು ನಮ್ಮ ತಾಕತ್ತು, ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ನಂತರ ರಾಜಕೀಯ ಚಾಣಕ್ಯ ಅಮೀತ್ ಶಾ ಅವರಿಗೆ ಬೆಳ್ಳಿಗಧೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!