Friday, March 24, 2023

Latest Posts

ಬಿಸಿಸಿಐ(BCCI) ವಿರುದ್ಧ ಕಾಂಗ್ರೆಸ್ ನಾಯಕ ಶಶಿ ತರೂರ್ ಗರಂ: ಕಾರಣವೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಿಸಿಸಿಐ(BCCI) ವಿರುದ್ಧ ​ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್(Shashi Tharoor)​ ಕಿಡಿಕಾರಿದ್ದಾರೆ.

ಸತತ ಬ್ಯಾಟಿಂಗ್​ ವೈಫಲ್ಯ ಕಾಣುತ್ತಿರುವ ರಾಹುಲ್​ ಬದಲಿಗೆ ಶುಭಮನ್​ ಗಿಲ್​ ಅವರಿಗೆ ತಂಡದಲ್ಲಿ ಅವಕಾಶ ನೀಡಿ ಎಂದು ಮಾಡಿದ್ದ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿರುವ ಶಶಿ ತರೂರ್,​ ‘ನಿವು ಸಂಜು ಸ್ಯಾಮ್ಸನ್​ ಬಗ್ಗೆ ಏನು ಹೇಳುತ್ತೀರಾ? ಏಕದಿನ ಪಂದ್ಯಗಳಲ್ಲಿ 76 ಸರಾಸರಿ ರನ್​​ ಹೊಂದಿರುವ ಅವರನ್ನು ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಿಗೆ ಹೊರಗಿಡಲಾಗಿದೆ. ತಂಡದಲ್ಲಿ ಉತ್ತಮ ಪ್ರದರ್ಶನ ನೀಡದವರಿಗೆ ಉದ್ದನೆಯ ಹಗ್ಗ ನೀಡುವುದು ಒಳಿತು ಎಂದು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಆಟಗಾರ ಉತ್ತಮ ಪ್ರದರ್ಶನ ತೋರುತ್ತಿದ್ದರೆ ಅವರಿಗೆ ತಂಡದಲ್ಲಿ ಸರಿಯಾದ ಅವಕಾಶ ನೀಡಬೇಕು. ಕೇವಲ ಸರಣಿಗೆ ಆಯ್ಕೆ ಮಾಡಿ ಅವರನ್ನು ಬೆಂಚ್​ಗೆ ಸೀಮಿತ ಮಾಡುವ ಮೂಲಕ ಅವರ ಕ್ರಿಕೆಟ್​ ಭವಿಷ್ಯವನ್ನು ಹಾಳು ಮಾಡಬಾರದು ಎಂದು ತರೂರ್​ ಹೇಳಿದ್ದಾರೆ.
ಈಗಾಗಲೇ ಸಂಜು ಸ್ಯಾಮ್ಸನ್​ ಅವರಿಗೆ ಟೀಮ್​ ಇಂಡಿಯಾದಲ್ಲಿ ಅವಕಾಶ ನೀಡದೇ ಇರುವ ಕುರಿತು ನೆಟ್ಟಿಗರು ಬಿಸಿಸಿಐ ಮತ್ತು ಆಯ್ಕೆ ಸಮಿತಿ ವಿರುದ್ಧ ಸರಣಿ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಶಶಿ ತರೂರ್ ಕೂಡ ಸಂಜು ಬೆನ್ನಿಗೆ ನಿಂತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!