ಹಿಂದೆ ಮೂರು ದಿನ ಅಶುದ್ಧ ಅಂತ ಮನೆಯ ಒಳಗೆ ಬರೋದಕ್ಕೂ ಬ್ಯಾನ್ ಮಾಡ್ತಿದ್ರು. ಅವರ ತಟ್ಟೆ ಅವರ ಲೋಟ ಮಾತ್ರ ಮುಟ್ಟಬಹುದು, ತೊಳೆದು ವಾಪಾಸ್ ಬಳಸಬಹುದು, ಫುಲ್ ಡೇ ಒಂದು ಕೆಲಸವೂ ಇಲ್ಲ ಬರೀ ರೆಸ್ಟ್.. ಈಗಿನವರು ಮನೆಯಿಂದ ಹೊರಹಾಕೋದಿಲ್ಲ. ಬಟ್ ಅಡುಗೆ ಮನೆಗೆ ಬರೋದಕ್ಕೆ, ಹೊರಗೆ ಬರೋದಕ್ಕೆ ರೆಸ್ಟ್ರಿಕ್ಟ್ ಮಾಡ್ತಾರೆ. ಅಂತೆಯೇ ಮಹಿಳೆಯರು ಕೂಡ ವಿಧಿ ಇಲ್ಲದೆ ರೆಸ್ಟ್ ಮಾಡ್ತಾರೆ.
ಇಮ್ಯಾಜಿನ್ ಮಾಡಿ, ಈಗಿನ ಬ್ಯುಸಿ ಶೆಡ್ಯೂಲ್‌ನಲ್ಲಿ ಯಾವುದೇ ಮನೆಕೆಲಸ ಮಾಡದೆ, ಅಡುಗೆ ಮಾಡದೆ ನೆಮ್ಮದಿಯಾಗಿ ನಿಮ್ಮ ರೂಮ್‌ನಲ್ಲಿ ನೀವು ಕುಳಿತುಕೊಂಡಿರೋದು, ಮೊಬೈಲ್ ನೋಡುತ್ತಾ ಅಥವಾ ಬುಕ್ಸ್ ಓದುತ್ತಾ ಟೈಮ್ ಪಾಸ್ ಮಾಡೋದು.. ಬಿಸಿ ಬಿಸಿ ಊಟ ರೂಮಿಗೆ ಬರೋದು.. ನೆಚ್ಚಿನ ಐಸ್‌ಕ್ರೀಮ್ ತಿನ್ನೋದಕ್ಕೆ ಸಿಗೋದು.. ಯಾವ ಕೆಲಸವೂ ಇಲ್ಲದೆ ಈ ರೀತಿ ಚಿಲ್ ಮಾಡೋ ಮಜನೇ ಬೇರೆ..
ಮುಟ್ಟಿನ ಮೂರು ದಿನ ಆದಷ್ಟು ರೆಸ್ಟ್ ಮಾಡಿ.. ಮೊದಲ ಎರಡು ದಿನ ರೆಸ್ಟ್ ಬೇಕೇಬೇಕು.. ವರ್ಕ್ ಫ್ರಮ್ ಹೋಮ್ ಪಡೆಯಿರಿ ಅಥವಾ ರಜೆಗಳು ಇದ್ದರೆ ಅದನ್ನೇ ಹಾಕಿ ರೆಸ್ಟ್ ಮಾಡಿ.. ಯಾಕೆ ಗೊತ್ತಾ?
ಈ ಸಮಯದಲ್ಲಿ ಹೆಣ್ಣಿಗೆ ಹೆಚ್ಚು ನಿದ್ದೆ ಬೇಕು, ಸುಸ್ತು ಹೊಟ್ಟೆ ನೋವು, ಸೊಂಟ ನೋವು, ಕಾಲು ಸೆಳೆತ ಇನ್ನಷ್ಟು ಸಮಸ್ಯೆಗಳಿಂದ ಸರಿಯಾಗಿ ರಾತ್ರಿ ನಿದ್ದೆ ಆಗಿರೋದಿಲ್ಲ. ಹೀಗಾಗಿ ಹೆಚ್ಚು ರೆಸ್ಟ್ ಮಾಡಿ.
ಈ ದಿನಗಳಲ್ಲಿ ನಿಮ್ಮಿಷ್ಟದ ತಿನಿಸು ತಿನ್ನೋದು ಅಥವಾ ಸಿನಿಮಾ ನೋಡೋದು, ಫೇಸ್ ಪ್ಯಾಕ್ ಹಚ್ಚೋದು ಹೀಗೆ ಸೆಲ್ಫ್ ಕೇರ್ ಮಾಡಿಕೊಂಡ್ರೆ ಸ್ಟ್ರೆಸ್ ಕಮ್ಮಿಯಾಗುತ್ತದೆ.
ಅತಿಯಾದ ನೋವಿದ್ರೆ ವ್ಯಾಯಾಮ ಮಾಡಿ, ಕಂಫರ್ಟಬಲ್ ಪೊಸಿಷನ್‌ಗೆ ತೆರಳಿ ನಿದ್ದೆ ಮಾಡಿ.
ಈ ಬ್ರೇಕ್ ದೇಹಕ್ಕೆ ಬೇಕು, ದಿನನಿತ್ಯದ ಜಂಜಾಟದಿಂದ ಸುಸ್ತಾಗಿರೋ ನಿಮ್ಮ ದೇಹ ಈ ಬ್ರೇಕ್‌ನ್ನು ಖುಷಿಯಿಂದ ಉಪಯೋಗಿಸಿಕೊಳ್ಳತ್ತೆ.
ಈ ಸಮಯದಲ್ಲಿ ಮಹಿಳೆಯರ ಜಡ್ಜ್‌ಮೆಂಟ್ ವಿಭಿನ್ನವಾಗಿರುತ್ತದೆ. ಹಾರ್ಮೋನ್ಸ್ ನಾರ್ಮಲ್ ಆಗಿ ಇರೋದಿಲ್ಲ. ರೆಸ್ಟ್‌ನಿಂದ ಎಲ್ಲವೂ ಕ್ಲಿಯರ್ ಆಗುತ್ತದೆ.