RESULT | Pass or Fail ಟೆನ್ಶನ್ ಬಿಟ್ಟಾಕಿ ಮಕ್ಕಳೇ, ಮರಳಿ ಪ್ರಯತ್ನಿಸಿ ಗೆಲುವು ನಿಶ್ಚಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ರಾಜ್ಯಾದ್ಯಂತ 8 ಲಕ್ಷ 69 ಸಾವಿರದ 968 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸದ್ಯ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ.

ಎಂದಿನಂತೆ ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಅಗ್ರಸ್ಥಾನದಲ್ಲಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಮಾರ್ಚ್ 25, 2024 ರಿಂದ ಏಪ್ರಿಲ್ 6, ರವರೆಗೆ ನಡೆದ SSLC ಪರೀಕ್ಷೆಯಲ್ಲಿ 441,910 ವಿದ್ಯಾರ್ಥಿಗಳು ಮತ್ತು 428,058 ವಿದ್ಯಾರ್ಥಿನಿಯರು ಹಾಜರಾಗಿದ್ದರು.

ಈ ಬಾರಿ 6,31,204 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದು, ಈ ಬಾರಿ ರಾಜ್ಯಾದ್ಯಂತ ಶೇ.76.91 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಪಾಸಾಗಲಿ ಅಥವಾ ಫೇಲಾಗಲಿ ನೀವು ಮೂರು ಬಾರಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿಸಲಾಗಿದೆ. ಉತ್ತೀರ್ಣರಾದವರು ತಮ್ಮ ಅಂಕಗಳನ್ನು ಸುಧಾರಿಸಲು ಪರೀಕ್ಷೆ-2 ಮತ್ತು ಪರೀಕ್ಷೆ-3 ಬರೆಯಬಹುದು.

2,87,416 (65.90%) ಹುಡುಗರು ಮತ್ತು 3,43,788 (81.11%) ಹುಡುಗಿಯರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಉಡುಪಿ ಪ್ರಥಮ ಸ್ಥಾನದಲ್ಲಿದೆ (ಶೇ.94). ದಕ್ಷಿಣ ಕನ್ನಡ ಜಿಲ್ಲೆ (ಶೇ 92.12) ದ್ವಿತೀಯ ಹಾಗೂ ಶಿವಮೊಗ್ಗ ಜಿಲ್ಲೆ (ಶೇ 88.67) ತೃತೀಯ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ (50.59%) ಕೊನೆಯ ಸ್ಥಾನದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!