ಮೊಬೈಲ್‌ನಲ್ಲಿ ಹಳೇ ಫೋಟೊಗಳನ್ನು ನೋಡಿದಾಗ ಎಷ್ಟು ಯಂಗ್ ಆಗಿದ್ವಿ ಅನಿಸೋದು ಕಾಮನ್, ಅದೇ ರೀತಿ ಇನ್ನೂ ಹತ್ತು ವರ್ಷ ಬಿಟ್ಟು ಫೋಟೊಸ್ ನೋಡಿಕೊಂಡಾಗ ಈಗಲೂ ಹಾಗೇ ಇದೀನಿ ಅನ್ಕೋಬೇಕಾ? ಹಾಗಿದ್ರೆ ಇಂದಿನಿಂದಲೇ ಸ್ಕಿನ್‌ಕೇರ್‌ನಲ್ಲಿ ರೆಟಿನಾಲ್ (Retinol) ಸೇರಿಸಿ…
ಇದೊಂದು ರೀತಿಯ ವಿಟಮಿನ್ ಎ ಸೆರಮ್, ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ವಯಸ್ಸಾದಂತೆ ಕಾಣುವ ಗೆರೆಗಳು, ಸುಕ್ಕುಗಟ್ಟುವ ಚರ್ಮ ಇದನ್ನು ಕಡಿಮೆ ಮಾಡುತ್ತದೆ.
ಉಪಯೋಗ ಏನು?
ಫೈನ್ ಲೈನ್ಸ್ ಹಾಗೂ ರಿಂಕಲ್ಸ್ ಕಡಿಮೆ ಮಾಡುತ್ತದೆ
ಎಣ್ಣೆಯುಕ್ತ ಚರ್ಮದಿಂದಾದ ಗುಳ್ಳೆಗಳು, ಮೊಡವೆಗಳ ಕಲೆ ಓಡಿಸುತ್ತದೆ.
ಬ್ರೈಟ್ ಆದ ಸ್ಕಿನ್ ನೀಡುತ್ತದೆ
ಹೆಚ್ಚು ಸೆಲ್‌ಗಳನ್ನು ಆಕ್ಟೀವ್ ಮಾಡಿ, ಫ್ರೆಶ್‌ನೆಸ್ ನೀಡುತ್ತದೆ
ಸೂರ್ಯದಿಂದ ಆದ ಡ್ಯಾಮೇಜ್‌ನ್ನು ರಿಪೇರ್ ಮಾಡುತ್ತದೆ
ಹೇಗೆ ಬಳಕೆ ಮಾಡೋದು?
ಇದನ್ನು ರಾತ್ರಿ ಹಚ್ಚುವುದು ಸೂಕ್ತ, ಬಿಸಿಲಿಗೆ ಸ್ಕಿನ್ ಇನ್ನಷ್ಟು ಡ್ಯಾಮೇಜ್ ಆಗುತ್ತದೆ.
ಮುಖ ತೊಳೆದ ನಂತರ ಮೈಲ್ಡ್ ಆದ ಮಾಯಿಶ್ಚರೈಸರ್ ಹಚ್ಚಿ ನಂತರ ರೆಟಿನಾಲ್ ಬಳಸಿ
ಪ್ರತೀ ರಾತ್ರಿ ಬಳಕೆ ಮಾಡಬೇಡಿ, ಇದು ನಿಮ್ಮ ಸ್ಕಿನ್‌ಗೆ ಸೆಟ್ ಆಗಲು ಸಮಯ ನೀಡಿ, ವಾರಕ್ಕೊಮ್ಮೆ, ನಂತರ ಮೂರು ದಿನಕ್ಕೊಮ್ಮೆ ಹೀಗೆ ಮಾಡುತ್ತಾ, ನಂತರ ಪ್ರತಿದಿನ ಬಳಕೆ ಮಾಡಿ