October 9, 2026
Friday, October 9, 2026
spot_img

ಶಿವಮೊಗ್ಗದಲ್ಲಿ ದುರಂತ | ದೇವಸ್ಥಾನದ ಲಿಫ್ಟ್‌ನಲ್ಲಿ ಸಿಲುಕಿ ನಿವೃತ್ತ ಇಂಜಿನಿಯರ್ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಿವಮೊಗ್ಗದ ದತ್ತಾತ್ರೇಯ ಸ್ವಾಮಿ ದೇವಸ್ಥಾನದ ಲಿಫ್ಟ್‌ನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ನಿವೃತ್ತ ಇಂಜಿನಿಯರ್‌ ಮೃತಪಟ್ಟಿದ್ದಾರೆ.

ಕುಮಾರಸ್ವಾಮಿ (80) ಸಾವಿಗೀಡಾದ ನಿವೃತ್ತ ಇಂಜಿನಿಯರ್. ಭಾನುವಾರ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಲಿಫ್ಟ್‌ನಲ್ಲಿ ಮೇಲೆ ತೆರಳಲು ಬಟನ್ ಒತ್ತಿ ಒಳಹೋದಾಗ, ಮೇಲಿಂದ ಬಂದ ಲಿಫ್ಟ್‌ನಲ್ಲಿ ಅವರು ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ರಕ್ಷಿಸಿದ್ದರು.

ನಂತರ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read