ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಐಎಎಸ್ ಅಧಿಕಾರಿ ದೇವೇಂದ್ರ ನಾಥ್ ದುಬೆ ಅವರ ಪತ್ನಿ ಮೋಹಿನಿ ದುಬೆ ಅವರು ಶನಿವಾರ ಲಕ್ನೋದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಬೆ ಅವರ ಮನೆಯ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಗಮನಿಸಿದ್ದಾರೆ. ಆಭರಣಗಳ ಜತೆಗೆ ಇತರೆ ಬೆಲೆಬಾಳುವ ವಸ್ತುಗಳು ಕೂಡ ಕಾಣೆಯಾಗಿದ್ದವು.
ಲಕ್ನೋದ ಇಂದಿರಾ ನಗರ ಪ್ರದೇಶದ ಸೆಕ್ಟರ್ 22 ರ ಪಾಶ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ನಾವು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ, ಕ್ರೈಂ ಬ್ರಾಂಚ್‌ನ ನಾಲ್ಕು ತಂಡಗಳು, ಶ್ವಾನ ದಳವನ್ನು ಹೊರತುಪಡಿಸಿ, ಮತ್ತು ವಿಧಿವಿಜ್ಞಾನ ತಂಡವು ಅಪರಾಧ ಸ್ಥಳಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.