ಪುತ್ತೂರು ಜ್ಯೂನಿಯರ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಿ. ವೆಂಕಟರಮಣ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪುತ್ತೂರು ಜೂನಿಯರ್ ಕಾಲೇಜಿನಲ್ಲಿ ಸುಮಾರು 42 ವರ್ಷಗಳ ಹಿಂದೆ ಪ್ರಾಂಶುಪಾಲರಾಗಿದ್ದ ಬೆಳ್ತಂಗಡಿ ನಿವಾಸಿ ಪಿ. ವೆಂಕಟರಮಣ(84) ಅವರು ಇಂದು ನಿಧನರಾಗಿದ್ದಾರೆ.

ಪಿ. ವೆಂಕಟರಮಣ ಅವರು ಸುಮಾರು 1980-81ರಲ್ಲಿ ಪುತ್ತೂರು ಜೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ವಿದ್ಯಾಧಿಕಾರಿಯಾಗಿ, ಜಿಲ್ಲಾ ಉಪನಿರ್ದೇಶಕರಾಗಿ, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ, ಜಂಟಿ ನಿರ್ದೇಶಕರಾಗಿ ಬಳಿಕ ಮಂಗಳೂರು ಸರಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಿವೃತ್ತಿ ಹೊಂದಿದ್ದರು.

ಬಳಿಕದ ದಿನದಲ್ಲಿ ಬೆಳ್ತಂಗಡಿಯ ನವೋದಯ ಪ್ರೌಢ ಶಾಲೆಯಲ್ಲಿ ಮತ್ತು ಲಾಯಿಲ ಬಿ.ಇಡಿ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದರ ಜೊತೆಗೆ ಅವರು ಹ್ಯವಾಸಿ ಯಕ್ಷಗಾನ ಕಲಾವಿದರಾಗಿ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

ಮೃತರು ಪತ್ನಿ ದಮಯಂತಿ, ಪುತ್ರರಾದ ಜಗದೀಶ್, ಕಿರಣ್ ಮತ್ತು ಪುತ್ರಿ ಉಷಾ, ಸಹೋದರರಾದ ಪಿ.ಜಿ. ಚಂದ್ರಶೇಖರ್, ಪಿ.ಜಿ. ಜಗನ್ನಿವಾಸ ಅವರನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here