ಬಾಂಬ್ ಪತ್ತೆ ದಳದಲ್ಲಿ ಕರ್ತವ್ಯದಲ್ಲಿ 10 ವರ್ಷ ಸೇವೆ ಸಲ್ಲಿಸಿದ 3 ಶ್ವಾನಗಳಿಗೆ ನಿವೃತ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್‍ನ ಏರ್ ಪೋರ್ಟ್ ಸೆಕ್ಯೂರಿಟಿ ಗ್ರೂಪ್‍ನ ಬಾಂಬ್ ಪತ್ತೆ ದಳದಲ್ಲಿ ಕರ್ತವ್ಯದಲ್ಲಿದ್ದ 3 ಶ್ವಾನಗಳನ್ನು ಸೇವೆಯಿಂದ ನಿವೃತ್ತಿಗೊಳಿಸಲಾಗಿದೆ. ಸುಮಾರು 10 ವರ್ಷಗಳ ಸೇವೆ ಸಲ್ಲಿಸಿದ ತಕ್ಷಕ್, ಶೆರೋ, ಟೈಗರ್ ಹೆಸರಿನ ಮೂರು ನಾಯಿಗಳು ನಿವೃತ್ತವಾಗಿವೆ.

ದಾಬೋಲಿ ವಿಮಾನ ನಿಲ್ದಾಣದಲ್ಲಿ ಮೂರೂ ಶ್ವಾನಗಳಿಗೆ ಸಿಎಸ್‍ಐಎಫ್ ದಳದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ವೇಳೆ ಅಧಿಕಾರಿಗಳು ಮೂರು ನಾಯಿಗಳಿಗೆ ಹೂವಿನ ಹಾರ ಹಾಕಿ ಪದಕ ನೀಡಿ ಗೌರವಿಸಿದರು.

ಈ ಸಂದರ್ಭ ಸಿಐಎಸ್‍ಎಫ್ ಯೋಧರೊಂದಿಗೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಮೂರು ನಾಯಿಗಳನ್ನು ದತ್ತು ಪಡೆಯಲು ಆಸಕ್ತಿ ತೋರಿದ ಸಾಕುಪ್ರಾಣಿ ಪ್ರಿಯರಿಗೆ ಹಸ್ತಾಂತರಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!