ಬಿಟಿಡಿಎ ಕಾರ್ಪಸ್ ಫಂಡ್ ವಾಪಸ್ ಹಿಂದಿರುಗಿಸಿ: ಡಿಸಿಎಂಗೆ ಶಾಸಕ ಮೇಟಿ ಮನವಿ

ಹೊಸದಿಗಂತ ವರದಿ ಬಾಗಲಕೋಟೆ:

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಾರ್ಪಸ್ ಫಂಡ್ ಅನ್ನು ಹಿಂದಿರುಗಿಸಿ ಎಂದು ಉಪಮುಖ್ಯಮಂತ್ರಿಗಳು, ಬೃಹತ್ ನೀರಾವರಿಯ ಸಚಿವರಾದ ಡಿ ಕೆ. ಶಿವಕುಮಾರ ಅವರಲ್ಲಿ ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಮನವಿ ಮಾಡಿದರು.

ಬಿಟಿಡಿಎ‌ 377 ಕೋಟಿ ರೂ. ಕಾರ್ಪಸ್ ಫಂಡ್‌ ಅನ್ನು ವಾಪಸ್ ಬಿಟಿಡಿಎಗೆ ನೀಡುವ ಮೂಲಕ ಬಾಗಲಕೋಟೆ ಪಟ್ಟಣ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಲು ಶಾಸಕರು ಮನವಿ ಮಾಡಿದರು.‌

ತಕ್ಷಣ ಈ ಸಮಸ್ಯೆ ಪರಿಹರಿಸುವುದಾಗಿ ಉಪಮುಖ್ಯಮಂತ್ರಿಗಳು ಶಾಸಕರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಜಯಕುಮಾರ ಸರನಾಯಕ, ಕಾಂಗ್ರೆಸ್ ಯುವ ಮುಖಂಡ ಹೊಳಬಸು ಶೆಟ್ಟರ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!