ಹೊಸದಿಗಂತ ವರದಿ ಹುಬ್ಬಳ್ಳಿ:
ಹೊಸ ಶಿಕ್ಷಣ ನೀತಿ ರಾಜ್ಯ ಸರ್ಕಾರ ಕೈಬಿಡುತ್ತಿರುವುದು ಖಂಡನೀಯ. ಎಸ್ ಇಪಿಯನ್ನು ವಿರೋಧಿಸಿ ಹಾಗೂ ಹೊಸ ಶಿಕ್ಷಣ ನೀತಿಯ ಜಾಗೃತಿ ಮುಡಿಸಲು ರಾಜ್ಯಾದ್ಯಂತ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ವಿಶೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣಾ ಪೂರ್ವ ಪ್ರಣಾಳಿಕೆ ಹಾಕಿದ್ದರ ಏಕೈಕ ಉದ್ದೇಶದಿಂದ ಎನ್ ಇ ಪಿ ತೆಗೆದುಹಾಕಲು ಮುಂದಾಗಿದೆ. ಕಾಂಗ್ರೆಸ್ ಸರ್ಕಾರ ಹಾಗೂ ಶಿಕ್ಷಣ ಸಚಿವರು ಹೊಸ ಶಿಕ್ಷಣ ನೀತಿಯ ಬಗ್ಗೆ ತಿಳಿದುಕೊಳ್ಳದೇ ರಾಜಕೀಯ ಹಿತಾಸಕ್ತಿಯಿಂದ ಕೈಬಿಡುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಡಪಂಥೀಯ ಬುದ್ದಿಜೀವಿಗಳ ಕಪಿಮುಷ್ಠಿಯಲ್ಲಿ ಇದ್ದಾರೆ. ಹೀಗಾಗಿ ಶಿಕ್ಷಣ ನೀತಿ ಬದಲಿಸಲು ಮುಂದಾಗಿದೆ. ಪಠ್ಯಪುಸ್ತಕದಲ್ಲಿ ಕೆಲ ಹೆಸರುಗಳ ದ್ವೇಷಕ್ಕಾಗಿ ಅವರ ಪಠ್ಯ ಕೈಬಿಡಲಾಗಿದೆ ಎಂದು ಆರೋಪಿಸಿದರು.