ಲಯಬದ್ಧ ಬ್ಯಾಟಿಂಗ್: ಭಾರತಕ್ಕೆ 266 ರನ್​ಗಳ ಟಾರ್ಗೆಟ್ ನೀಡಿದ ಬಾಂಗ್ಲಾದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ವಿರುದ್ಧ ಬಾಂಗ್ಲಾದೇಶ ನಿಗದಿತ 50 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡು 265 ರನ್​ ಕಲೆಹಾಕಿದೆ .

ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಭಾರತ ಈಗಾಗಲೇ ಫೈನಲ್‌ಗೇರಿದ್ದು, ಪ್ರಮುಖ ಆಟಗಾರರಿಗೆ ವಿಶ್ರಾಂತಿ​ ನೀಡಿ ಐದು ಬದಲಾವಣೆಯೊಂದಿಗೆ ಮೈದಾನಕ್ಕಿಳಿದಿದೆ. ಬಾಂಗ್ಲಾ ಮೇಲೆ ಆರಂಭಿಕ ಓವರ್​ಗಳಲ್ಲಿ ಯಶ ಕಂಡ ಬೌಲರ್​ಗಳು ನಂತರ ಕೊಂಚ ಮಂಕಾದರು. ಮಧ್ಯಮ ಕ್ರಮಾಂಕದಲ್ಲಿ ಬಾಂಗ್ಲಾ ನಾಯಕ ಶಕೀಬ್​ ಮತ್ತು ಹೃದಯೋಯ್ ಉತ್ತಮ ಜೊತೆಯಾಟ ನೀಡಿದರು.

. ಈ ಜೋಡಿ 4ನೇ ವಿಕೆಟ್​ಗೆ 101 ರನ್​ ಭರ್ಜರಿ ಜೊತೆಯಾಟವಾಡಿತು. ಇದರಿಂದ 150ರೊಳಗೆ ಸರ್ವಪತನ ಆಗುವ ಸಾಧ್ಯತೆಯಲ್ಲಿದ್ದ ಬಾಂಗ್ಲಾ 250 ಗಡಿ ದಾಟಿತು. ಈ ಇಬ್ಬರು ಬ್ಯಾಟರ್​​ಗಳಲ್ಲದೇ ಕೆಳ ಕ್ರಮಾಂಕದಲ್ಲಿ ನಸುಮ್ ಅಹ್ಮದ್ ಮತ್ತು ಮಹಿದಿ ಹಸನ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇವರ ಅಂತಿಮ ಓವರ್​ಗಳ ಹೋರಾಟಕ್ಕೆ ತಂಡದ ಬಲ ನೀಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!