Thursday, June 1, 2023

Latest Posts

IPL 2023 | ದಾಖಲೆ ನಿರ್ಮಿಸಿದ ರಿಂಕು ಸಿಂಗ್, ಐದು ಬ್ಯಾಕ್ ಟು ಬ್ಯಾಕ್ ಸಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಇತಿಹಾಸದಲ್ಲೇ ಹಿಂದೆಂದೂ ಆಗದ ದಾಖಲೆಯೊಂದು ನಿನ್ನೆ ನಿರ್ಮಾಣವಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಿಂಕು ಸಿಂಗ್ ಹಿಂದೆಂದೂ ಕೇಳಿರದ ದಾಖಲೆ ಮಾಡಿದ್ದಾರೆ. ಕೊನೆಯ ಐದು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಬಾರಿಸಿ ಇತಿಹಾಸ ಸೃಷ್ಟಿಸಿದ್ದಾರೆ.

ಕೊನೆಯ ಐದು ಎಸೆತಗಳಲ್ಲಿ 28 ರನ್‌ಗಳ ಗುರಿಯನ್ನು ರಿಂಕು ಸಿಂಗ್ ಸುಲಭವಾಗಿ ತಲುಪಿದ್ದಾರೆ. ಯಶ್ ದಯಾಳ್ ಕೊನೆಯ ಓವರ್ ಎಸೆದಿದ್ದು, ಐದು ಸಿಕ್ಸ್ ಮೂಲಕ ಕೆಕೆಆರ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಜತೆಗೆ ಐಪಿಎಲ್ ಇತಿಹಾಸದಲ್ಲಿ ಕೊನೆಯ ಓವರ್‌ನಲ್ಲಿ ಅತ್ಯಧಿಕ ರನ್ ಬಾರಿಸಿ ಪಂದ್ಯ ಗೆದ್ದ ಶ್ರೇಯ ಕೊಲ್ಕತ್ತಾ ನೈಟರ್ ರೈಡರ‍್ಸ್ ತಂಡಕ್ಕೆ ಸಿಕ್ಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!