September 28, 2026
Monday, September 28, 2026
spot_img

ಬಾಗಲಕೋಟೆಯ ಮೊಸರು ಉತ್ಸವದ ವೇಳೆ ಸಣ್ಣ ಕಾರಣಕ್ಕೆ ಗಲಾಟೆ : ಪೊಲೀಸರಿಂದ ಲಾಠಿಚಾರ್ಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಗಲಕೋಟೆಯ ವಿದ್ಯಾಗಿರಿ ಇಂಜಿನಿಯರಿಂಗ್‌ ಕಾಲೇಜು ಸರ್ಕಲ್‌ ಬಳಿ ನಿನ್ನೆ ರಾತ್ರಿ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮದಲ್ಲಿ ಎರಡು ಗುಂಪುಗಳ ನಡುವೆ ಸಣ್ಣ ಕಾರಣವೊಂದಕ್ಕೆ ಜಗಳ ನಡೆದಿದ್ದು, ಪೊಲೀಸರು ಲಾಠಿಚಾರ್ಜ್‌ ಮಾಡಿದ್ದಾರೆ.

ವೇದಿಕೆಯ ಮೇಲೆ ಹಾಡು ಹಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಅದೇ ಹೆಚ್ಚಾಗಿ ಹೊಡೆದಾಟ ಆರಂಭವಾಗಿದೆ. ನಂತರ ಸಿಕ್ಕಸಿಕ್ಕವರಿಗೆ ಹೊಡೆದು, ಹೊಡೆಸಿಕೊಳ್ಳುವುದು ಆರಂಭವಾಗಿದೆ.

ಸೆಲಬ್ರೇಷನ್‌ಗೆಂದು ಬಂದ ಜನ ಗಲಾಟೆ ನೋಡಿ ಭಯಪಟ್ಟು ಓಡಲು ಆರಂಭಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ಕೆಲಸ ಆರಂಭಿಸಿದ್ದಾರೆ. ಗುಂಪುಗಳನ್ನು ಚದುರಿಸಲು ಲಾಠಿ ಚಾರ್ಜ್‌ ಮಾಡಿದ್ದಾರೆ. ಪೊಲೀಸರ ಸಮಯೋಚಿತ ಮಧ್ಯಪ್ರವೇಶದಿಂದಾಗಿ ಯಾವುದೇ ಭಾರಿ ಅಹಿತಕರ ಘಟನೆ ಸಂಭವಿಸದೆ ಪರಿಸ್ಥಿತಿ ತಿಳಿಯಾಯಿತು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಶಾಂತಿ ಕಾಪಾಡಲಾಗಿದೆ.

Must Read