ದೇವಾಲಯದ ಆವರಣದಲ್ಲಿ ಮಾಂಸದ ತುಂಡುಗಳನ್ನೆಸೆದು ವಿಕೃತಿ: ಸ್ಥಳದಲ್ಲಿ ಉದ್ವಿಗ್ನತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇವಾಲಯದ ಆವರಣದಲ್ಲಿ ದುಷ್ಕರ್ಮಿಗಳು ಮಾಂಸದ ತುಂಡುಗಳನ್ನು ಎಸೆದು ಎರಡು ಸ್ಥಳಗಳಲ್ಲಿ ವಿಗ್ರಹಗಳನ್ನು ಅಪವಿತ್ರಗೊಳಿಸಿದ್ದರಿಂದ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ. ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದುಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ತಾಲ್ಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರ್ಚಕರು ದೇವಸ್ಥಾನಕ್ಕೆ ಹೋದಾಗ ಆವರಣದಲ್ಲಿ ಮಾಂಸದ ತುಂಡುಗಳು ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸರ್ಕಲ್ ಇನ್ಸ್ ಪೆಕ್ಟರ್ ಶಿವ ಪ್ರತಾಪ್ ಸಿಂಗ್ ಮತ್ತು ಠಾಣಾಧಿಕಾರಿ ಹರಿ ಶ್ಯಾಮ್ ಸಿಂಗ್ ಸ್ಥಳಕ್ಕೆ ತೆರಳಿ ಆವರಣವನ್ನು ಸ್ವಚ್ಛಗೊಳಿಸಿದರು. ಪೊಲೀಸರು ಮಧ್ಯಪ್ರವೇಶಿಸಿದರೂ ಸೂಕ್ತ ನ್ಯಾಯ ಸಿಗಲಿಲ್ಲ ಎಂದು ಜನ ರಸ್ತೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಮೂರು ಗಂಟೆಗಳ ಕಾಲ ಯಾವುದೇ ಗಲಭೆ ನಡೆಯದಂತೆ ಪೊಲೀಸರು ಪ್ರತಿಭಟನಾಕಾರರಿಗೆ ದಿಗ್ಬಂಧನ ಹಾಕಿದ್ರು.

ಪ್ರತಿಭಟನಾಕಾರರು ನಾಲ್ಕು ಅಂಗಡಿಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ ಜೊತೆಗೆ ಸ್ಮಶಾನದ ಗೇಟ್ ಸಹ ನಾಶಮಾಡಿದ್ದು ಐಜಿ, ಆಯುಕ್ತ ಪ್ರಶಾಂತ್ ಕುಮಾರ್ ಹಾಗೂ ರಾಜಶೇಖರ್ ತಾಳಗ್ರಾಮ ಗ್ರಾಮಕ್ಕೆ ಆಗಮಿಸಿದರು. ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದ್ದು, ಗಲಭೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಕೇಶ್ ಮಿಶ್ರಾ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!