Sunday, October 1, 2023

Latest Posts

ಹರಿಯಾಣದಲ್ಲಿ ಗಲಭೆ: ಮೂರು ಜಿಲ್ಲೆಗಳ ಮುಸ್ಲಿಮರನ್ನು ಬಹಿಷ್ಕರಿಸಲು ನಿರ್ಧರಿಸಿದ 14 ಗ್ರಾಮಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣದಲ್ಲಿ ನಡೆದ ಗಲಭೆ ಪ್ರಕರಣ ಮತ್ತಷ್ಟು ಆತಂಕ ಮೂಡಿಸಿದ್ದು, ಈ ನಡುವೆ ಇಲ್ಲಿನ ಮೂರು ಜಿಲ್ಲೆಗಳ 14 ಹಳ್ಳಿಗಳಿಗೆ ಮುಸ್ಲಿಮರನ್ನ ಬಹಿಷ್ಕರಿಸಲು (Boycott Muslims) ನಿರ್ಧರಿಸಿರುವುದಾಗಿ 14 ಗ್ರಾಮ ಪಂಚಾಯಿತಿಗಳು ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ ಬರೆದಿವೆ.

ಕಳೆದ ಜುಲೈ 31 ರಂದು ಆರಂಭವಾದ ಕೋಮು ಘರ್ಷಣೆಯಿಂದ ಮಹೇಂದ್ರಗಢ, ಜಜ್ಜರ್‌ ಮತ್ತು ರೇವಾರಿ ಜಿಲ್ಲೆಗಳಲ್ಲೂ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ 14 ಗ್ರಾಮ ಪಂಚಾಯಿತಿಗಳು ಮುಸ್ಲಿಮರನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿವೆ.

ಮುಸ್ಲಿಮರಿಗೆ ಮನೆ ಮತ್ತು ಅಂಗಡಿಗಳನ್ನ ಬಾಡಿಗೆಗೆ ನೀಡದಂತೆ ನಿರ್ಧಾರ ತೆಗೆದುಕೊಂಡಿದ್ದು ಪೊಲೀಸ್‌ ಇಲಾಖೆ (Police Department) ಹಾಗೂ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ತಿಳಿಸಲಾಗಿದೆ.

ನುಹ್‌ ಜಿಲ್ಲೆಯಲ್ಲಿ ಸಂಭವಿಸಿದ ಕೋಮು ಸಂಘರ್ಷ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಗುರುಗ್ರಾಮ್‌, ಸೋನಿಪತ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೂ ವ್ಯಾಪಿಸಿತ್ತು. ಗಲಭೆಕೋರರ ಗುಂಪು ವಿವಿಧ ಪ್ರದೇಶಗಳಿಗೆ ನುಗ್ಗಿ ಹಾನಿಯುಂಟುಮಾಡಿತ್ತು. ಈವರೆಗೆ 50ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿದ್ದು 200ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ. ಇದರೊಂದಿಗೆ ಹಿಂಸಾಚಾರಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ?
14 ಹಳ್ಳಿಗಳ ಮುಖಂಡರು ಬರೆದಿರುವ ಪತ್ರದಲ್ಲಿ ಮುಸ್ಲಿಂ ಸಮುದಾಯದ ಜನರಿಗೆ ಬಾಡಿಗೆ ಮನೆ, ಅಂಗಡಿಗಳನ್ನು ಬಾಡಿಗೆ ನೀಡುವುದಿಲ್ಲ. ಇಲ್ಲಿನ ಸಂಸ್ಥೆಗಳಲ್ಲೂ ಕೆಲಸ ನೀಡುವುದನ್ನ ನಿರಾಕರಿಸುವಂತೆ ಮನವಿ ಮಾಡಿದ್ದೇವೆ. ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತದೆ. ಹಿಂದೆಯೂ ಈ ರೀತಿ ಘೋಷಣೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಈ ನಡುವೆ ಗುರುಗ್ರಾಮ್‌ ನಗರ ಪಾಲಿಕೆ ಕೌನ್ಸಿಲರ್‌ ಬ್ರಹ್ಮ್ ಯಾದವ್, ಜನರು ತಮ್ಮ ಆಸ್ತಿಯನ್ನು ಇತರರಿಗೆ ಬಾಡಿಗೆ ಅಥವಾ ಮಾರಾಟ ಮಾಡುವ ಮುನ್ನ ಗುರುತಿನ ಸಾಕ್ಷಿಗಳನ್ನ ಪರಿಶೀಲಿಸಬೇಕು. ಜಿಲ್ಲೆಯ ವಾಲ್ಮೀಕಿ ಜನಾಂಗದವರೇ ಮಾಂಸದ ಅಂಗಡಿಗಳನ್ನ ನಡೆಸಬೇಕು. ಮುಸ್ಲಿಮರು ನಡೆಸುತ್ತಿರುವ ಅಂಗಡಿಗಳನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!