ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಿಷಬ್ ಶೆಟ್ಟಿ ಕಾಂತಾರ ಸಕ್ಸಸ್ ನಂತರ ಕಾಂತಾರ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಕಾಂತಾರ-2 ಶೂಟಿಂಗ್ ಆರಂಭವಾಗಬೇಕಿದೆ. ಈ ಮಧ್ಯೆ ರಿಷಬ್ ಭರ್ಜರಿಯಾಗಿ ಬಾಲಿವುಡ್‌ಗೆ ಎಂಟ್ರಿ ನೀಡ್ತಿದ್ದಾರೆ. ಹೌದು, ಲಗಾನ್, ಪಾನಿಪತ್ ಹಾಗೂ ಮೊಹೆಂಜೋದಾರೋದಂಥ ಹಿಟ್ ಸಿನಿಮಾಗಳನ್ನು ಕೊಟ್ಟ ಆಶುತೋಶ್ ಗೌರೀಕರ್ ಡೈರೆಕ್ಷನ್‌ನಲ್ಲಿ ರಿಷಬ್ ನಟಿಸಲಿದ್ದಾರೆ.
ತಲೈವಿ ನಿರ್ಮಾಪಕ ವಿಷ್ಣುವರ್ಧನ್ ರಿಷಬ್ ಸಿನಿಮಾ ಮೇಲೆ 200 ಕೋಟಿ ರೂಪಾಯಿ ಬಂಡವಾಳ ಹಾಕೋಕೆ ರೆಡಿಯಾಗಿದ್ದಾರೆ. ಮುಂದಿನ ವರ್ಷ ಈ ಪೌರಾಣಿಕ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, 2025ಕ್ಕೆ ತೆರೆಕಾಣಲಿದೆ.