ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ನನ್ನ ಫೇವರೆಟ್ ಎಂದು ನಟ ರಿಷಬ್ ಶೆಟ್ಟಿ ಹೇಳಿದ್ದಾರೆ. ರಿಷಬ್ ಸಿನಿಮಾ ಕಡೆ ಮುಖ ಮಾಡುವಾಗ ಆಲ್ರೆಡಿ ಸುದೀಪ್ ಸ್ಟಾರ್, ಅವರಿಂದ ಸ್ಫೂರ್ತಿ ಪಡೆದ ರಿಷಬ್ ನಾನು ಎಷ್ಟು ಕೋಟಿ ದುಡ್ಡು ಮಾಡಿದ್ರೂ ಯಾವಾಗ್ಲೂ ಸುದೀಪ್ ಫ್ಯಾನ್ ಆಗಿಯೇ ಇರ್ತೇನೆ ಎಂದು ಹೇಳಿದ್ದಾರೆ.
ರಿಷಬ್ ನಟನೆಯ ‘ಕಾಂತಾರ’ ಸಿನಿಮಾ 400 ಕೋಟಿ ರೂಪಾಯಿ ಬಾಚಿಕೊಂಡಿದೆ. ಆದರೆ, ರಿಷಬ್ ಅವರು ಬದಲಾಗಿಲ್ಲ. ಆಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ.
ರಿಷಬ್ ಶೆಟ್ಟಿ ಅವರು ‘ಖಡಕ್ ಸಿನಿಮಾ’ ಹೆಸರಿನ ಯೂಟ್ಯಬ್ ಚಾನೆಲ್ಗೆ ಸಂದರ್ಶನ ಕೊಟ್ಟಿದ್ದಾರೆ. ಈ ವೇಳೆ ರಿಷಬ್ಗೆ ಬೇರೆ ಬೇರೆ ಫೋಟೋ ತೋರಿಸಲಾಗಿದೆ. ಪ್ರತಿ ಫೋಟೋ ತೋರಿಸಿದಾಗಲೂ ಅದರ ಹಿಂದಿನ ಕಥೆಯನ್ನು ರಿಷಬ್ ಹೇಳಿದ್ದಾರೆ. ರಿಷಬ್, ಪ್ರಗತಿ, ಸುದೀಪ್ ಹಾಗೂ ಪ್ರಿಯಾ ಒಟ್ಟಾಗಿ ನಿಂತು ತೆಗೆಸಿದ ಫೋಟೋ ತೋರಿಸಲಾಗಿದೆ. ಈ ಫೋಟೋ ಹಿಂದಿನ ಕಥೆಯನ್ನು ರಿಷಬ್ ಅವರು ವಿವರಿಸಿದ್ದಾರೆ.