ಹನುಮಾನ್ ಪಾತ್ರದಲ್ಲಿ ತೆರೆ ಮೇಲೆ ಮಿಂಚಲು ಸಜ್ಜಾದ ರಿಷಬ್ ಶೆಟ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

‘ಕಾಂತಾರ’ ನಿರ್ಮಾಣದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದು, ಕಾಡುಬೆಟ್ಟ ಶಿವನ ಲುಕ್ಕು ಕಣ್ತುಂಬಿಕೊಳ್ಳೋದಿಕ್ಕೆ ಅಖಂಡ ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯ್ತಿದ್ದಾರೆ.

ಇದರ ನಡುವೆ ಹನುಮಾನ್ ಪಾತ್ರದಲ್ಲಿ ಮಿಂಚಲು ರಿಷಬ್ ಶೆಟ್ಟಿ ರೆಡಿಯಾಗಿದ್ದಾರೆ.

ಟಾಲಿವುಡ್ ಅಂಗಳದಲ್ಲಿ ಮೂಡಿಬಂದಿದ್ದ ‘ಜೈ ಹನುಮಾನ್’ ಸಿನಿಮಾ ಪ್ಯಾನ್ ಇಂಡಿಯಾದಾದ್ಯಂತ ಬಾಕ್ಸ್ ಆಫೀಸ್ ಬೇಟೆಯಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದ ಹನುಮಾನ್ ಸಿನಿಮಾದ ಸೀಕ್ವೆಲ್ ಮೂಡಿಬರುತ್ತಿದ್ದು, ಇದೀಗ ಪ್ಯಾನ್‌ ಇಂಡಿಯಾ ಹಿಟ್ ಸೀಕ್ವೆಲ್‌ನಲ್ಲಿ ‘ಕಾಂತಾರ’ ಶಿವ ನಟಿಸುವುದು ಅಧಿಕೃತವಾಗಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಡೈರೆಕ್ಷನ್ ಅಡಿಯಲ್ಲಿ ಮೂಡಿಬರುತ್ತಿರುವ ‘ಹನುಮಾನ್’ ಸಿನಿಮಾದ ಸೀಕ್ವೆಲ್ ನಲ್ಲಿ ರಿಷಬ್ ಶೆಟ್ಟಿ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾವಳಿಯ ವಿಶೇಷ ಸಂದರ್ಭದಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

ನಿರ್ದೇಶಕ ಪ್ರಶಾಂತ್ ವರ್ಮಾ ‘ಜೈ ಹನುಮಾನ್’ ಚಿತ್ರದ ಸೀಕ್ವೆಲ್‌ನಲ್ಲಿ ಹನುಮಾನ್ ಪಾತ್ರಧಾರಿಗೆ ಬಹಳಷ್ಟು ಅಳೆದೂ ತೂಗಿ ರಿಷಬ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ.

ಕೈಯಲ್ಲಿ ರಾಮನ ವಿಗ್ರಹ ಹಿಡಿದು ರಿಷಬ್ ಶೆಟ್ಟಿ ಹನುಮಾನ್ ಪಾತ್ರದಲ್ಲಿ ಪವರ್ ಫುಲ್ ಪೋಸ್ಟ್ ಕೊಟ್ಟಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಬಹಳ ಆಕರ್ಷಕವಾಗಿದೆ. ‘ಜೈ ಹನುಮಾನ್’ ಸಿನಿಮಾವನ್ನು ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್‌ನ ಭಾಗವಾಗಿ ತಯಾರಾಗಲಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ನಿರ್ಮಾಣ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!