ಮಾ.31ಕ್ಕೆ ರಿಲೀಸ್ ಆಗಲಿದೆ ರಿಷಿ ಕಪೂರ್ ಅಭಿನಯದ ಕೊನೆ ಚಿತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅಭಿನಯದ ಕೊನೆಯ ಸಿನಿಮಾ ‘ಶರ್ಮಾಜಿ ನಮ್‌ಕೀನ್’ ಒಟಿಟಿಯಲ್ಲಿ ಬಿಡುಗಡೆ ಕಾಣಲಿದೆ.

ಇದೇ ತಿಂಗಳ 31 ರಂದು ಸಿನಿಮಾ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ. ಹಿತೇಶ್ ಭಾಟಿಯಾ ನಿರ್ದೇಶನದ ಸಿನಿಮಾದ ಮೊದಲಾರ್ಧದಲ್ಲಿ ರಿಷಿ ಕಪೂರ್ ನಟಿಸಿದ್ದಾರೆ. ಅವರ ನಿಧನದ ನಂತರ ಉಳಿದ ಭಾಗದಲ್ಲಿ ಪರೇಶ್ ರಾವಲ್ ಕಾಣಿಸಿಕೊಂಡಿದ್ದಾರೆ. ಒಂದು ಚಲನಚಿತ್ರದಲ್ಲಿ ಇಬ್ಬರು ನಟರು ಒಂದೇ ಪಾತ್ರವನ್ನು ಇದೇ ಮೊದಲ ಬಾರಿಗೆ ನಿರ್ವಹಿಸಿದ್ದಾರೆ.

ನಿವೃತ್ತಿ ಜೀವನದ ನಂತರದ ಬದುಕಿನ ಸುತ್ತ ಸಿನಿಮಾ ಹೆಣೆದಿದ್ದು, ಭಾವನಾತ್ಮಕ ಕಥೆ ಇರಲಿದೆ. ಈ ಸಿನಿಮಾ ಎಲ್ಲರ ಮೆಚ್ಚುಗೆಗೂ ಪಾತ್ರವಾಗುತ್ತದೆ ಎನ್ನುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!