ಬ್ರಿಟನ್ ಪ್ರಧಾನಿ ಗದ್ದುಗೆ ಏರಿದ ರಿಷಿ ಸುನಕ್ ಗೆ ಇದೆ ಭಾರತದೊಂದಿಗೆ ಅವಿನಾಭಾವ ಸಂಬಂಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಗದ್ದುಗೆ ಏರಿದ್ದಾರೆ.

ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಮತದಾನದ ಮೂಲಕ ಲಿಜ್ ಟ್ರಸ್ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ರಿಷಿ ಸುನಕ್ ಹಿನ್ನಡೆ ಅನುಭವಿಸಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 45 ದಿನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಸುನಕ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಪಟ್ಟ ಅಲಂಕರಿಸಿದ್ದಾರೆ.

ಇನ್ನು ರಿಷಿ ಸುನಕ್ ಗೂ ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ರಿಷಿ ಸುನಕ್ ಅವರ ಅಜ್ಜ ಅಜ್ಜಿ ಪಂಜಾಬ್ ಮೂಲದವರು. ಅವರ ತಂದೆ ತಾಯಿಯರಿಬ್ಬರೂ ಭಾರತೀಯ ಮೂಲದವರು. ಸುನಕ್ ಅವರ ಪೋಷಕರು ಫಾರ್ಮಸಿಸ್ಟ್ ಆಗಿದ್ದು 1960 ರ ದಶಕದಲ್ಲಿ ಪೂರ್ವ ಆಫ್ರಿಕಾದಿಂದ ಯುಕೆಗೆ ವಲಸೆ ಬಂದಿದ್ದರು.

ಇನ್ನು ರಿಷಿ ಸುನಕ್ ಅವರು ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಪತಿ. ಇವರಿಗೆ ಕೃಷ್ಣ ಮತ್ತು ಅನೌಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಅದೇ ರೀತಿ ರಿಷಿ ಸುನಕ್ ಅವರು ಸಂಸತ್ತಿನಲ್ಲಿ ಯಾರ್ಕ್‌ಷೈರ್‌ನಿಂದ ಸಂಸದರಾಗಿ ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ಅವರು ಹಾಗೆ ಮಾಡಿದ ಮೊದಲ ಯುಕೆ ಸಂಸದರಾಗಿದ್ದರು. ಬೋರಿಸ್ ಜಾನ್ಸನ್ ಅವರ ನೇತೃತ್ವದಲ್ಲಿ ಹಣಕಾಸು ಸಚಿವರಾಗಿದ್ದ , ರಿಷಿ ಸುನಕ್ ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಅವರ ನಿವಾಸದಲ್ಲಿ ದೀಪಾವಳಿಗೆ ದೀಪ ಬೆಳಗಿಸಿದ್ದರು.

ಇನ್ನು ರಿಷಿ ಸುನಕ್ ಅನೇಕ ಕಡೆಗಳಲ್ಲಿ ತಮ್ಮ ಪರಂಪರೆಯ ಬಗ್ಗೆ ಮಾತನಾಡುತ್ತಾರೆ . ಅವರ ಕುಟುಂಬವು ಮೌಲ್ಯಗಳು ಮತ್ತು ಸಂಸ್ಕೃತಿಯ ಬಗ್ಗೆ ನೆನಪಿಸುತ್ತಾ ಇರುತ್ತಾರೆ.

ರಿಷಿ ಸುನಕ್ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿಗೆ ಬಂದು ತಮ್ಮ ಅತ್ತೆಯನ್ನು ಭೇಟಿಯಾಗುತ್ತಿರುತ್ತಾರೆ. ಅನೇಕ ಬಾರಿ ಒತ್ತಡದ ಸಂದರ್ಭಗಳಲ್ಲಿ ಭಗವದ್ಗೀತೆಯು ಆಗಾಗ್ಗೆ ನನ್ನನ್ನು ರಕ್ಷಿಸುತ್ತದೆ ಮತ್ತು ಕರ್ತವ್ಯನಿಷ್ಠರಾಗಿರಲು ನೆನಪಿಸುತ್ತದೆ ಎಂದು ರಿಷಿ ಹೇಳಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!