Tuesday, October 3, 2023

Latest Posts

ಮಂತ್ರಾಲಯಕ್ಕೆ ತೆರಳಿ ರಾಯರ ದರುಶನ ಪಡೆದ ರಿಷಿ ಸುನಕ್ ಕುಟುಂಬ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾರತಕ್ಕೆ ಆಗಮಿಸಿದ್ದರು. ಇದೀಗ ರಿಷಿ ಸುನಕ್ ಕುಟುಂಬ ಮಂತ್ರಾಲಯಕ್ಕೆ ತೆರಳಿ ರಾಯರ ದರುಶನ ಪಡೆದಿದ್ದಾರೆ.
ರಿಷಿ ಅವರ ತಾಯಿ ಉಷಾ ಸುನಕ್ ಅವರ ಪೋಷಕರು ಮಂತ್ರಾಲಯದಲ್ಲಿ ಪೂಜೆ ಮಾಡಿಸಿದ್ದು, ಸುಧಾಮೂರ್ತಿ ಅವರು ಜೊತೆಯಲ್ಲಿದ್ದಾರೆ.

ಈ ಹಿಂದೆಯೂ ದೆಹಲಿ ಶೃಂಗಸಭೆ ಮುಗಿದ ನಂತರ ಅಕ್ಷರಧಾಮ ದೇವಸ್ಥಾನಕ್ಕೆ ಕುಟುಂಬ ಭೇಟಿ ನೀಡಿತ್ತು. ತದನಂತರ ಬೆಂಗಳೂರಿನಲ್ಲಿ ಶಾಸಕ ಉದಯ ಗರುಡಾಚಾರ್ ಅವರ ಮನೆಯಲ್ಲಿ ಕೃಷ್ಣಜನ್ಮಾಷ್ಟಮಿ ಆಚರಣೆಯಲ್ಲಿಯೂ ರಿಷಿ ಪೋಷಕರು ಭಾಗಿಯಾಗಿದ್ದರು.
ರಾಯರ ದರುಶನದ ನಂತರ ಮಂತ್ರಾಲಯದ ಪೀಠಾಧಿಪತಿ ಶ್ರೂ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!