ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆ: ಪೆಟ್ರೋಲಿಯಂ ಸಚಿವ ಪುರಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್

ದೇಶದಲ್ಲಿ ದಿನೇ ದಿನೇ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಈ ಕುರಿತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ‘ಇತರ ದೇಶಗಳಿಗೆ ಹೋಲಿಸಿದ್ರೆ, ಇದು ಸಾಕಷ್ಟು ನಾಮಮಾತ್ರವಾಗಿದೆ’ ಎಂದು ಹೇಳಿದರು.
ಭಾರತದಲ್ಲಿ ಇಂಧನ ಬೆಲೆಗಳು ಇತರ ದೇಶಗಳಲ್ಲಿ ಏರಿಕೆಯಾದ ಬೆಲೆಗಳಲ್ಲಿ 1/10ನೇ ಒಂದು ಭಾಗವಾಗಿದೆ. ಭಾರತದಲ್ಲಿ, ಏಪ್ರಿಲ್ 2021 ಮತ್ತು ಮಾರ್ಚ್ 2022ರ ನಡುವೆ ಪೆಟ್ರೋಲ್ ಬೆಲೆಗಳು ಶೇಕಡಾ 5ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಇದಕ್ಕೆ ಹೋಲಿಸಿದರೆ, ಇದು ಶೇಕಡಾ 51, ಕೆನಡಾ ಶೇಕಡಾ 52, ಜರ್ಮನಿ ಶೇಕಡಾ 55, ಯುನೈಟೆಡ್ ಕಿಂಗ್ಡಮ್ (ಯುಕೆ) ಶೇಕಡಾ 55, ಫ್ರಾನ್ಸ್ ಶೇಕಡಾ 50, ಸ್ಪೇನ್ ಶೇಕಡಾ 58 ರಷ್ಟು ಹೆಚ್ಚಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!